ಉದಯವಾಹಿನಿ, ಮುಂಬೈ: ಮಲೈಕಾ ಅರೋರಾ ಮತ್ತು ಶಾರುಖ್ ಖಾನ್ ಅವರ ಸೂಪರ್‌ಹಿಟ್ ಹಾಡು ಚೈಯ್ಯಾ ಚೈಯಾ ಬಿಡುಗಡೆಯಾಗಿ ೨೪ ವರ್ಷಗಳು ಕಳೆದಿವೆ.
೧೧೫ ವರ್ಷಗಳ ಹಿಂದೆ ಪ್ರಾರಂಭವಾದ ಊಟಿಯ ರೈಲಿನಲ್ಲಿ ಚೈಯ್ಯಾ ಚಿತ್ರೀಕರಿಸಲಾಗಿದೆ.
ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದಂತೆ ಭಾಸವಾಗುತ್ತಿದೆ. ಮಲೈಕಾ ಅರೋರಾ ಅತ್ಯುತ್ತಮ ನೃತ್ಯಗಾರ್ತಿ ಮತ್ತು ಅವರ ವೃತ್ತಿಜೀವನದಲ್ಲಿ ಅವರು ಅನೇಕ ಜನಪ್ರಿಯ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ.ಆ ಹಾಡುಗಳನ್ನು ಅನೇಕ ವರ್ಷಗಳಿಂದ ಜನರು ಗುನುಗುತ್ತಿದ್ದು ಇವುಗಳಲ್ಲಿ ಚೈಯಾ-ಚೈಯಾ ಹಾಡು ಸಹ ಒಂದು.ಶಾರುಖ್ ಖಾನ್ ಮತ್ತು ಮಲೈಕಾ ಅರೋರಾ ಅವರ ಮೇಲೆ ಚಿತ್ರಿಸಲಾದ ದಿಲ್ ಸೆ ಚಿತ್ರದ ಈ ಹಾಡು ತುಂಬಾ ಅದ್ಭುತವಾಗಿ ಮೂಡಿಬಂದಿದೆ ಅದೂ ಚಲಿಸುತ್ತಿರುವ ರೈಲಿನಲ್ಲಿ. ಹಾಡು ಸುಂದರವಾಗಿತ್ತು ಆದರೆ ಅದನ್ನು ರೈಲಿನಲ್ಲಿ ಚಿತ್ರೀಕರಿಸುವುದು ಕೂಡ ಸಾಕಷ್ಟು ವಿಶಿಷ್ಟವಾಗಿತ್ತು.ದಿಲ್ ಸೆ ಚಿತ್ರದ ಈ ಹಾಡಿಗೆ ಅನೇಕ ದೊಡ್ಡ ಹೆಸರುಗಳು ಸೇರಿಕೊಂಡಿದ್ದವು. ಚಿತ್ರದ ನಿರ್ದೇಶಕರು ಮಣಿರತ್ನಂ, ಹಾಡಿನ ಗಾಯಕರು ಸುಖ್ವಿಂದರ್ ಮತ್ತು ಸಪ್ನಾ ಅವಸ್ತಿ, ಹಾಡಿನ ಸಂಯೋಜಕರು ಎಆರ್ ರೆಹಮಾನ್, ಅದರ ನಾಯಕ ನಟ ಶಾರುಖ್ ಖಾನ್ ಮತ್ತು ಇದನ್ನು ಫರಾ ಖಾನ್ ನೃತ್ಯ ಸಂಯೋಜಿಸಿದ್ದರು.

Leave a Reply

Your email address will not be published. Required fields are marked *

error: Content is protected !!