ಉದಯವಾಹಿನಿ, ಶಿವಮೊಗ್ಗ: ‘ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಈ ಕುರಿತಂತೆ ಅವರು ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ರಾಗಿಗುಡ್ಡ ಬಡಾವಣೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಕುರಿತಂತೆ ಎಸ್ಪಿ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪರಾಮರ್ಶಿಸಿ ವರದಿ ಮಾಡಿ: ರಾಗಿಗುಡ್ಡ ಬಡಾವಣೆಯಲ್ಲಿ ಘಟನೆ ನಡೆದ ವೇಳೆ, ಪರ ಊರಿನ ಎರಡು ಓಮ್ನಿ ಕಾರುಗಳಿದ್ದ ಕುರಿತಂತೆ ಮಾಧ್ಯಮಗಳ ವರದಿ ಕುರಿತಂತೆ ಎಸ್ಪಿ ಅವರು ಸ್ಪಷ್ಟನೆ ನೀಡಿದ್ದಾರೆ.
‘ಸದರಿ ಕಾರುಗಳು ನ್ಯಾಮತಿ ಕಡೆಯದ್ದಾಗಿದೆ. ಕಾರುಗಳಲ್ಲಿ ಎರಡು ಕೋಮಿನ ಕಡೆಯವರು ಇದ್ದರು. ಮೆರವಣಿಗೆ ನೋಡುವ ಉದ್ದೇಶದಿಂದ ಅವರೆಲ್ಲ ಶಿವಮೊಗ್ಗಕ್ಕೆ ಆಗಮಿಸಿದ್ದರು. ಶಿವಮೊಗ್ಗ ನಗರ ವೀಕ್ಷಿಸಿ ರಾಗಿಗುಡ್ಡಕ್ಕೆ ಆಗಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!