ಉದಯವಾಹಿನಿ, ಹೈದರಾಬಾದ್ನ: ಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕಿರಿಕ್ ಚೆಲುವೆ ಕಪ್ಪು ಬಣ್ಣದ ಸಿಂಗಲ್ ಪೀಸ್ ಉಡುಗೆಯಲ್ಲಿ ಇದೀಗ ಬೋಲ್ಡ್ ಲುಕ್ ನಲ್ಲಿ ಮಿಂಚುವ ಮೂಲಕ ಅಭಿಮಾನಿಗಳ ನಿದ್ದೆ ಕದಿದ್ದಾರೆ.
ನಟಿಯಾಗಿ ಬಹು ಬೇಡಿಕೆಯಲ್ಲಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಭಿಮಾನಿಗಳಿಗಾಗಿ ಬೋಲ್ಡ್ ಫೋಟೋಶೂಟ್ ಮಾಡಿದ್ದಾರೆ. ರಶ್ಮಿಕಾ ಈ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಿಂದೆಯೂ ರಶ್ಮಿಕಾ ಬೋಲ್ಡ್ ಅವತಾರದಲ್ಲಿ ಮಿಂಚಿದ್ದರು.
ನಟಿಯ ಪೋಟೋಗೆ ಲೈಕ್ ಹಾಗೂ ಕಾಮೆಂಟ್ ಗಳು ಮಹಾಪೂರವೇ ಹರಿದುಬರುತ್ತಿದೆ.
ಸದ್ಯಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರ ಬಹು ನಿರೀಕ್ಷಿತ ಚಿತ್ರ ಪುಷ್ಪ ೨ ಗಾಗಿ ಕಾಯುತ್ತಿದ್ದಾರೆ. ಪುಷ್ಪಾ ಚಿತ್ರದ ಜೊತೆಗೆ ರಶ್ಮಿಕಾ ಅವರ ನಾಲ್ಕು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ. ನ್ಯಾಶನಲ್ ಕ್ರಶ್ ನಟಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳಲ್ಲಿ ಕಾತುರ ಇದೆ. ಅಲ್ಲು ಅರ್ಜುನ್ ಜೊತೆ ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿಯಾಗಿ ನಟಿಸಿದ ನಂತರ ರಶ್ಮಿಕಾ ಮಂದಣ್ಣಳ ಅದೃಷ್ಟವೇ ಬದಲಾಯಿತು.ಆ ಚಿತ್ರದ ಯಶಸ್ಸಿನಿಂದ ತೆಲುಗು ಚಿತ್ರರಂಗದಲ್ಲಿ ಭದ್ರವಾದ ತಳಪಾಯ ಸಿಕ್ಕಿದೆ .ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ನಂತರ ಬಾಲಿವುಡ್ ಗೆ ಜಿಗಿದ ನಟಿ ರಶ್ಮಿಕಾ ಮಂದಣ್ಣ ಈಗ ಅಲ್ಲಿಯೂ ಕೆಲ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ರಶ್ಮಿಕಾ ಮಂದಣ್ಣ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
೨೦೧೬ ರಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.
