ಉದಯವಾಹಿನಿ, ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಬರೋಬ್ಬರಿ ೭೫೦ ಕೋಟಿ ರೂಪಾಯಿ ನಗದು ಹೊತ್ತು ಸಾಗುತ್ತಿದ್ದ ಟ್ರಕ್ ಅನ್ನು ಪತ್ತೆ ಹಚ್ಚಿ ಬೆಚ್ಚಿ ಬಿದ್ದ ಘಟನೆ ನಡೆದಿದೆ,ಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚುನಾವಣಾ ಕರ್ತವ್ಯ ನಿರತ ಪೊಲೀಸರು ಅನುಮಾನದ ಮೇಲೆ ಟ್ರಕ್‌ನ್ನು ಅಡ್ಡಗಟ್ಟಿ ಪರಿಶೀಲನೆ ಮಾಡಿದ ವೇಳೆ ಅದರಲಿದ್ದ ನೋಟಿನ ಕಂತೆ ಕಂತೆಗಳ ರಾಶಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಟ್ರಕ್ ನಲ್ಲಿ ೭೫೦ ಕೋಟಿ ರೂಪಾಯಿ ನಗದು ಇದ್ದುದು ಪತ್ತೆಯಾಗಿದೆ.
ಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ‘ಅಸಾಧಾರಣ ಸರಕು’ ಸಾಗಿಸುತ್ತಿದ್ದ ಟ್ರಕ್‌ನ್ನು ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ಅಡ್ಡಗಟ್ಟಿ ೭೫೦ ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ನಗದು ನೋಡಿ ಪೊಲೀಸರನ್ನು ದಿಗ್ಭ್ರಮೆಗೊಳಗಾದ ಘಟನೆ ನಡೆದಿದೆ. ಕೇರಳದಿಂದ ಹೈದರಾಬಾದ್‌ಗೆ ವರ್ಗಾಯಿಸಲಾಗುತ್ತಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಗಿಸುತ್ತಿದ್ದ ಎನ್ನುವುದು ಪತ್ತೆ ಯಾದ ನಂತರ ಎಲ್ಲಾ ದಾಖಲೆ ಪರಿಶೀಲಿಸಿ ಬಿಟ್ಟಿರುವ ಘಟನೆಯೂ ನಡೆದಿದೆ. ಚುನಾವಣಾಧಿಕಾರಿ ವಿಕಾಸ್ ರಾಜ್ ಮಾತನಾಡಿ, ಕೇರಳದಿಂದ ಹೈದರಾಬಾದ್ ಯೂನಿಯನ್ ಬ್ಯಾಂಕ್ ಗೆ ಸಾಗಿಸುತ್ತಿದ್ದ ಮೊತ್ತ ಇದಾಗಿದೆ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
.
