?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಉದಯವಾಹಿನಿ ಮಸ್ಕಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಹಾಗೂ ಅಪಘಾತದಲ್ಲಿ ಗಂಭೀರ ಗಾಯವಾಗಿರುವ ಗಾಯಾಳುಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಬಂಜಾರ ಸಂತ ಸೇವಾಲಾಲ ಸಂಘಟನೆ ಮುಖಂಡರು ತಹಶೀಲ್ದಾರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪಟ್ಟಣದ ಬಸವೇಶ್ವರ ನಗರದಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಶೀರಸ್ತೆದಾರ ಅಕ್ತರ್ ಅಲಿ ಅವರು ಮನವಿ ಸ್ವೀಕರಿಸಿದರು. ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ರೇಖಪ್ಪ ಎಂಬುವರು ತಮ್ಮ ಮನೆ ದೇವರಾದ ಕೋಟೆಕಲ್ಲ ದುರ್ಗಾದೇವಿ ದೇವಸ್ಥಾನಕ್ಕೆ ಹರಕೆ ತೀರಿಸಲು ಸಂಬ೦ಧಿಕರೊ೦ದಿಗೆ ಟಾಟಾ ಏಸ್ ವಾಹನದಲ್ಲಿ ತೆರಳುವ ವೇಳೆ ಇಲ್ಲಕಲ್ಲ ಸಮೀಪ ರಕ್ಕಸಗಿ ಹತ್ತಿರ ರಾಯಚೂರು ಬೆಳಗಾವಿ ರಾಷ್ಟಿಯ ಹೆದ್ದಾರಿಯಲ್ಲಿ ಟಾಟಾ ಏಸ್ ವಾಹನಕ್ಕೆ ಎದುರಿಗೆ ಬರುತ್ತಿರುವ ಕ್ರಿಯೇಟ್ ಕಾರ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಒಂದೇ ಕುಟುಂಬದ ಅತ್ತೆ ಸೊಸೆಗಳಾದ ಗಿರವ್ವ, ರುಕ್ಮೀಣಿ ಹಾಗೂ ಅದೇ ತಾಂಡದವರಾದ ಸೀತವ್ವ ಎಂಬುವರು ಸ್ಥಳದಲ್ಲೆ ಮೃತಪಟ್ಟಿದ್ದು, ರುಕ್ಮೀಣಿ ಅಳಿಯನಾದ ಅಶೋಕ ಎಂಬುವರ ಕಾಲು ಕಟ್ ಆಗಿ ಆಸ್ಪತ್ರೆಯಲ್ಲಿ ಪ್ರಾಣವನ್ನು ಬಿಟ್ಟಿದ್ದಾರೆ, ಉಳಿದ ೧೯ ಮಂದಿಗಳಿಗೆ ಗಂಭೀರ ಗಾಯಗಳಾಗಿದೆ. ಆರೇಳು ಜನರಿಗೆ ಮೂಳೆ ಸಂಬ೦ಧಪಟ್ಟ ಶಸ್ರ‍್ತಚಿಕಿತ್ಸೆ ಮಾಡಲು ಹಣ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೂರು ಜನ ಮೃತ ಮಹಿಳೆಯರು ವಿಧವೆರಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ್ದಾರೆ, ಸದರಿ ಮೃತರಿಗೆ ಜಮೀನು ಇಲ್ಲ, ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಕುಟುಂಬದ ಜವಬ್ದಾರಿ ಇವರೇ ನಿರ್ವಹಿಸುತ್ತಿದ್ದು, ಅವರ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಆರ್ಥಿಕ ಪರಿಸ್ಥಿತಿಯಿಂದ ತೀರಾ ಬಡವರಿದ್ದು, ಅವರ ಉಪ ಜೀವನಕ್ಕಾಗಿ ತಾವೂ ಬಡ ಲಂಬಾಣಿ ಕುಟುಂಬಗಳಿಗೆ ಪರಿಹಾರ ನೀಡಬೇಕು,ಹೀಗಾಗಿ ತಾವೂಗಳು ಅಪಘಾತ ಸ್ಥಳವನ್ನು ಪರಿಶೀಲಿಸಿ ಮೃತ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಂಜಾರ ಸಂತ ಸೇವಾಲಾಲ ಸಂಘದ ಅಧ್ಯಕ್ಷ ದೇವಪ್ಪ ರಾಠೋಡ್, ವಿಠಲ ಕೆಳೂತ್, ಆನಂದ ರಾಠೋಡ ವಕೀಲರು, ಈಶಪ್ಪ ಜಾಧವ,ಪೂಲಪ್ಪ ರಾಠೋಡ್, ಹನುಮಂತಪ್ಪ, ರಾಮಪ್ಪ,ಶೇಠಪ್ಪ, ಮೌನೇಶ, ಅಮರೇಶ, ಹನುಮಂತ,ರಮೇಶ ಸೇರಿದಂತೆ ಇನ್ನಿತರಿದ್ದರು.
