ಉದಯವಾಹಿನಿ, ನವದೆಹಲಿ: ಮುಖ್ಯಮಂತ್ರಿ ಕುರ್ಚಿ ತೊರೆಯಲು ಹಲವು ಬಾರಿ ಬಯಸಿದ್ದೆ. ಆದರೆ ಅದು ನನ್ನನ್ನು ಬಿಡಲು ಬಯಸುತ್ತಿಲ್ಲ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದೇನೆ.”ಹೈಕಮಾಂಡ್ ನನ್ನ ಮೇಲೆ ಅಂತಹ ನಂಬಿಕೆ ತೋರಿಸಿದೆ, ಇದು ಅಪರೂಪ, ಮತ್ತು ಅದಕ್ಕೆ ಏನಾದರೂ ಕಾರಣವಿರಬೇಕು” ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಹೈಕಮಾಂಡ್ ನನ್ನ ಮೇಲೆ ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿ. ಮುಖ್ಯಮಂತ್ರಿ ಆಗಲು ಎಂದಿಗೂ ಬಯಸಿರಲಿಲ್ಲ ಆದರೆ ಹುದ್ದೆ ತಮ್ಮನ್ನು ಬಿಟ್ಟು ಹೋಗದಂತೆ ಮಾಡಿದೆ. ಭವಿಷ್ಯದಲ್ಲಿಯೂ ಇದು ಅದೇ ಆಗಬಹುದು ಎಂದು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅಶೋಕ್ ಗೆಹ್ಲೋಟ್ ಅವರು ಪಕ್ಷದಲ್ಲಿ ಒಗ್ಗಟ್ಟು ಮತ್ತು ಚುನಾವಣಾ ಟಿಕೆಟ್ ಪಡೆಯುವಲ್ಲಿ ಮತ್ತೊಬ್ಬ ನಾಯಕ ಸಚಿನ್ ಪೈಲಟ್ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
