ಉದಯವಾಹಿನಿ, ಬೆಂಗಳೂರು: ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ತಾವೊಬ್ಬ ಶ್ರೇಷ್ಠ ಆರಂಭಿಕ ಆಟಗಾರ ಎನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.ಆದರೆ ಈಗ ವಿಷಯ ಏನಪ್ಪಾ ಅಂದರೆ, ಡೇವಿಡ್ ವಾರ್ನರ್ ಸ್ಪೋಟಕ ಶತಕ ಗಳಿಸುತ್ತಿದ್ದಂತೆ ಅವರು ಸಂಭ್ರಮಿಸಿದ ರೀತಿ ಮಾತ್ರ ಎಲ್ಲರ ಗಮನ ಸೆಳೆದಿದೆ. ಹೌದು, ಪಾಕ್ ವಿರುದ್ಧ ಸತತ ನಾಲ್ಕನೇ ಏಕದಿನ ಶತಕವನ್ನು ಗಳಿಸಿದ ನಂತರ ಅವರು ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಪುಷ್ಪಾ ಶೈಲಿಯಲ್ಲಿ ಸಂಭ್ರಮವನ್ನು ಆಚರಿಸಿದರು.
