ಉದಯವಾಹಿನಿ, ಶ್ರೀಹರಿಕೋಟಾ: ಭಾರತದ ‘ಬಾಹುಬಲಿ’ ರಾಕೆಟ್ ಮಾರ್ಕ್-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಅಮೆರಿಕದ ಬ್ಲೂಬರ್ಡ್‌-6 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾ ಉಡ್ಡಯನ ಕೇಂದ್ರದ ಎರಡನೇ ಲಾಂಚ್‌ ಪ್ಯಾಡ್‌ನಿಂದ ಬೆಳಗ್ಗೆ 8:54ಕ್ಕೆ ಮಾರ್ಕ್‌ 3 ರಾಕೆಟ್ 6,500 ಕೆ.ಜಿ ತೂಕದ ಭಾರೀ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು.ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್‌ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ .ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು. ಉಪಗ್ರಹ ಉಡಾವಣೆ ಉಶಸ್ವಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋವನ್ನು ಅಭಿನಂದಿಸಿದ್ದಾರೆ. LVM3-M6 ಯಶಸ್ವಿಯಾಗಿ ಮತ್ತು ನಿಖರವಾಗಿ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು.

ಭಾರತದ ನೆಲದಿಂದ ಭಾರತದ ರಾಕೆಟ್‌ ಮೂಲಕ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿರುವುದು ವಿಶೇಷ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕ ಮೂಲದ AST ಸ್ಪೇಸ್‌ಮೊಬೈಲ್ ಮಧ್ಯೆ ನಡೆದ ವಾಣಿಜ್ಯ ಒಪ್ಪಂದದ ಭಾಗವಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 43.5 ಮೀಟರ್ ಎತ್ತರ ಮತ್ತು 640 ಟನ್ ತೂಕವಿರುವ LVM3 ರಾಕೆಟ್‌ ಅನ್ನು ಬಾಹುಬಲಿ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!