ಉದಯವಾಹಿನಿ, ನಾವು ಚಿಕ್ಕವರಾಗಿದ್ದಾಗಿನಿಂದಲೂ ಮನೆಯಲ್ಲಿ ಹಿರಿಯರ ಬಾಯಲ್ಲಿ ಒಂದು ಮಾತನ್ನು ಪ್ರತಿದಿನ ಕೇಳಿಯೇ ಇರುತ್ತೇವೆ, ಅದೇನೆಂದರೆ ರಾತ್ರಿ ಹೊತ್ತು ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಟ್ಟು, ಬೆಳಗ್ಗೆ ಅದನ್ನು ಕುಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ.ಈ ಮಾತನ್ನು ಅನೇಕರು ಅನುಸರಿಸಿಯೂ ಸಹ ಇರುತ್ತಿರುತ್ತಾರೆ, ಅನೇಕ ವೈದ್ಯರು (Doctors) ಮತ್ತು ತಜ್ಞರು ಸಹ ಈ ಮಾತನ್ನು ಒಪ್ಪುತ್ತಾರೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದರಿಂದ ಔಷಧೀಯ ಗುಣ ಸಿಗುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದರೆ ಈ ಮಾತು ಎಷ್ಟರ ಮಟ್ಟಿಗೆ ಸತ್ಯ ಅಂತ ಅನೇಕರಲ್ಲಿ ಗೊಂದಲ ಸಹ ಇರುತ್ತದೆ.
ತಾಮ್ರವು ತುಂಬಾನೇ ಅತ್ಯಗತ್ಯವಾದ ಪೋಷಕಾಂಶವಾಗಿದ್ದು, ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುವುದರಿಂದ ಹಿಡಿದು ಮೆದುಳಿನ ರಾಸಾಯನಿಕ ಸಂದೇಶ ವ್ಯವಸ್ಥೆಯನ್ನು ನಿರ್ವಹಿಸುವ ತನಕ ದೇಹದ ಅನೇಕ ಕಾರ್ಯಗಳಲ್ಲಿ ತಾಮ್ರವು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಆದರೆ ವೈದ್ಯರು ಈ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ದೇಹಕ್ಕೆ ಈ ನೀರು ಆಯಾನುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಇದು ಉರಿಯೂತ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಈ ನೀರು ನಮ್ಮ ಹಿಮೋಗ್ಲೋಬಿನ್ ಅನ್ನು ಸಹ ಹೆಚ್ಚು ಮಾಡುತ್ತದೆ.ಬನ್ನಿ ಹಾಗಾದರೆ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರು ಇನ್ನೂ ಯಾವ ಯಾವ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತದೆ ಅಂತ ಇಲ್ಲಿ ತಿಳಿದುಕೊಳ್ಳೋಣ.
ತಾಮ್ರದ ಪಾತ್ರೆಯಲ್ಲಿರುವ ನೀರು ಉತ್ಕರ್ಷಣ ನಿರೋಧಕವಾಗಿರುವುದರಿಂದ ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಕ್ಯಾನ್ಸರ್ ಅಂತ ಮಹಾಮಾರಿ ರೋಗದಿಂದ ಇದು ನಮ್ಮನ್ನು ದೂರವಿಡುತ್ತದೆ ನೋಡಿ. ತಾಮ್ರದ ಪಾತ್ರೆಯಲ್ಲಿರುವ ನೀರು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರ ದೇಹದಲ್ಲಿನ ರಕ್ತದೊತ್ತಡವನ್ನು ಇದು ನಿಯಂತ್ರಣದಲ್ಲಿಡಲು ತುಂಬಾನೇ ಸಹಾಯ ಮಾಡುತ್ತದೆ.
