
ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಶನಿವಾರದಂದು ಇಂಡಿ ಇಇ ಅವರ ನೇತೃತ್ವದಲ್ಲಿ ಗ್ರಾಹಕರ ಕುಂದುಕೊರತೆಗಳ ಸಭೆ ನಡೆಯಿತು. ಹೆಸ್ಕಾಂ ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಇಂಡಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರಾದ ಎಸ್.ಎ. ಬಿರಾದಾರ ಅವರು ಭಾಗವಹಿಸಿ ಮಾತನಾಡಿ ಪ್ರತಿ ತಿಂಗಳು 3ನೇ ಶನಿವಾರದಂದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ಇದು ಒಂದು ವೇದಿಕೆಯಾಗಿದೆ, ತಾಲೂಕಿನ ಹಲವಾರು ಗ್ರಾಮಗಳಿಂದ ಆಗಮಿಸಿದ ರೈತರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಹೆಸ್ಕಾಂ ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆಯ ಸದುಪಯೋಗವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ,ಕೋರವಾರ ಶಾಖಾಧಿಕಾರಿ ಶ್ರೀನಿವಾಸ ಕುಲಕರ್ಣಿ, ಅಧಿಕಾರಿಗಳಾದ ಶಿವಾನಂದ ಜಗನ್ನಾಥ, ಮಲ್ಲು ಪೂಜಾರಿ,ಜಿ.ಎಂ.ಮಕಾಂದರ, ರೈತ ಮುಖಂಡರುಗಳಾದ ಸಂಗನಗೌಡ ಬಿರಾದಾರ, ಜಿ.ಎಸ್, ಪಾಟೀಲ,ಮೈಹಿಬೂಬ ಹುಂಡೇಕಾರ, ಕೆಂಚಪ್ಪ ಪೂಜಾರಿ,ಎಂ.ಡಿ.ಕಣಮೇಶ್ವರ,ಯಮನೂರ ಸಣ್ಣಕ್ಕಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳ ರೈತರು ಉಪಸ್ಥಿತರಿದ್ದರು.
