ಉದಯವಾಹಿನಿ,ಬಂಗಾರಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸವರ್ಣಿಯಿಂದ ಹಲ್ಲೆಗೆ ಒಳಗಾದ ದೊಡ್ಡ ವಲಗಮಾದಿ ಗ್ರಾಮದ ಅಮರೇಶ್ ಎಂಬುವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ದಲಿತ ಸಮುದಾಯವಿದ್ದು ,ಮೀಸಲು ಕ್ಷೇತ್ರವಾಗಿದೆ ಆದರೂ ಸಹ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ.
ತಾಲ್ಲೂಕಿನ ದೊಡ್ಡ ವಲಗಮಾದಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಅಮರೇಶ್ ರವರು ಜೀವನಕ್ಕಾಗಿ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದರು .ಆದರೆ ಅದೇ ಗ್ರಾಮದ ಸವರ್ಣೀಯರಾದ ಜಗದೀಶ್ ಸಿಂಗ್ ,ರವೀಂದ್ರ ಸಿಂಗ್, ಸತೀಶ್ ಸಿಂಗ್ ರವರು ಅಂಬರೀಶ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

ಘಟನೆಗೆ ಕಾರಣ : ಜಗದೀಶ್ ಸಿಂಗ್ ರವರು ತಮ್ಮ ಮನೆ ನಿರ್ಮಾಣ ಕಾರ್ಯಕ್ಕಾಗಿ ಅಂಬರೀಶ್ ರವರನ್ನು ನೇಮಿಸಿಕೊಂಡಿದ್ದರು .ಕಟ್ಟಡ ಕಾಮಗಾರಿ ಪೂರ್ಣವಾದ ನಂತರ ಜಗದೀಶ್ ಸಿಂಗ್ ರವರು ಕೂಲಿ ಹಣ ಕೊಡದೆ ಮೀನಾ ಮೇಷ ಎಣಿಸಿದ್ದರು ಹಾಗೂ ಕೆಲವು ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಂಡಿರುವುದಿಲ್ಲ .ಅಕ್ಟೋಬರ್ 17ರಂದು ಜಗದೀಸಿಂಗ್ ರವರು ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಅಂಬರೀಷ್ ರವರು ತಮ್ಮ ಕೂಲಿ ಹಣ ಕೊಡುವಂತೆ ಕೇಳಿದಾಗ ಇದರಿಂದ ಕೆಂಡಮಂಡಲರಾದ ಜಗದೀಶ್ ಸಿಂಗ್ ರವರು ರವೀಂದ್ರ ಸಿಂಗ್ ಮತ್ತು ಸತೀಶ್ ಸಿಂಗ್ ಜೊತೆಗೂಡಿ ಅಂಬರೀಷ್ ರವರ ಮೇಲೆ ದೌರ್ಜನ್ಯ ಎಸಗಿ ಅವರ ಕೈ ಕಾಲುಗಳನ್ನು ಕಟ್ಟಿ ಹಾಕಿ ,ಅವಾಚ್ಚ ಶಬ್ದಗಳಿಂದ ನಿಂದಿಸುವುದರೋಂದಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ .ಇದನ್ನು ಕಂಡ ಗ್ರಾಮಸ್ಥರು ತೀವ್ರ ಅಸ್ವಸ್ಥಗೊಂಡ ಅಂಬರೀಷ್ ರವರನ್ನು ಬಂದ ಮುಕ್ತಗೊಳಿಸಿ ಆಸ್ಪತ್ರೆಗೆ ದಾಖಲಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಸಮಿತಿಯ ಅಧ್ಯಕ್ಷರಾದ ತಹಸಿಲ್ದಾರ್ ಯು. ರಶ್ಮಿ ರವರು ಹಾಗೂ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆಯ ಶಿವಾರೆಡ್ಡಿ ರವರು ಘಟನೆ ನಡೆದು ಮೂರು ದಿನಗಳಾದರೂ ಸಹ ಇದುವರೆಗೂ ಹಲ್ಲೆ ಒಳಗಾದ ವ್ಯಕ್ತಿಯನ್ನು ಸೌಜನ್ಯಕ್ಕಾದರೂ ಭೇಟಿ ಮಾಡದಿರುವುದು ದಲಿತ ವಿರೋಧ ನೀತಿಗೆ ಸಾಕ್ಷಿಯಾಗಿದೆ .ಇದೇ ರೀತಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ‌ ಅಧಿಕಾರಿಗಳು ಸಹ ಸ್ಪಂದಿಸದೆ ಇರುವುದು ಪರೋಕ್ಷವಾಗಿ ಸವರ್ಣೀಯರ ಪರವಾಗಿದ್ದು ದಲಿತರ ಮೇಲೆ ಹಲ್ಲೆಗೆ ಕುಮ್ಮಕ್ಕು ನೀಡುವಂತಾಗಿದೆ. ಎಂದು ದಲಿತ ಮುಖಂಡ ಹುಣಸನಹಳ್ಳಿ ವೆಂಕಟೇಶ್ ಆರೋಪಿಸಿದರು .

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸೂಲಿಕುಂಟೆ ರಮೇಶ್. ರಾಜಪ್ಪ. ಮಾರುತಿ. ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!