ಉದಯವಾಹಿನಿ,ಬಂಗಾರಪೇಟೆ: ಜಮೀನಿದ್ದು,1೦೦ವರ್ಷಕ್ಕೂ ಅಧಿಕ ಆಯಸ್ಸುಳ್ಳ ಬೃಹದಾಕಾರದ ಆಲದ ಮರವಿದ್ದು, ಕೆಲವು ಪಟ್ಟಬದ್ರ ಹಿತಾಸಕ್ತಿಗಳು ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಸೋಗಿನಲ್ಲಿ ಮರದ ರೆಂಬೆಗಳನ್ನು ಕತ್ತರಿಸುವುದರೊಂದಿಗೆ ಸರ್ಕಾರಿ ಸ್ಥಳವನ್ನು ಅತಿಕ್ರಮಿಸಲು ಯತ್ನಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡರಾದ ವೆಂಕಟಾಮ್ ಅವರು ಆರೋಪ ಮಾಡಿದರು. ತಾಲ್ಲೂಕಿನ ಕಾರಹಳ್ಳಿ ವ್ಯಾಪ್ತಿಯ ನರ‍್ನಹಳ್ಳಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸದರಿ ವಿವಾಧಿತ ಸರ್ಕಾರಿ ಸ್ಥಳಕ್ಕೆ ಸಂಬ0ಧಪಟ್ಟ0ತೆ ತಹಸೀಲ್ದಾರ್ ರಶ್ಮಿ ಹಾಗೂ ಪಿಡಿಓ ಹಾಗೂ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಸರ್ಕಾರಿ ಜಮೀನನ್ನು ರಕ್ಷಿಸುವ ಉದ್ದೇಶದಿಂದ ಪ್ರಶ್ನಿಸಲಾಗಿ ನನ್ನ ವಿರುದ್ದ ಹಲ್ಲೆ ನಡೆಸಿರುತ್ತಾರೆಂದು ಗಂಭೀರ ಆರೋಪ ಮಾಡಿದರು.
ಆರೋಪಕ್ಕೆ ಪ್ರತ್ಯಾರೋಪ ಮಾಡಿದ ಗ್ರಾಮಸ್ಥರು: ಸ್ಥಳೀಯರು ಹೇಳಿದಂತೆ ಅನಾಧಿಕಾಲದಿಂದಲೂ ಸದರಿ ಸ್ಥಳದ ಒಂದು ಭಾಗ ಹುಲ್ಲುಗಾವಲಾಗಿದ್ದು, ಮತ್ತೊಂದು ಭಾಗ ಕಿರಿದಾದ ಕುಂಟೆ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಗ್ರಾಮದ ಎಲ್ಲಾ ಕಲ್ಮಶಗಳು ಕುಂಟೆಯಲ್ಲಿ ಶೇಕರಣೆಯಾಗಿ ಸಾಂಕ್ರಾಮಿಕ ರೋಗಗಳು ಬರುತ್ತಿದ್ದವು. ಆದ ಕಾರಣ ಗ್ರಾಮಸ್ಥರ ಸಮಕ್ಷಮದಲ್ಲಿ ಊರಿನ ಜನರ ಅನುಕೂಲಕ್ಕಾಗಿ ೨ಎಕರೆ ಸರ್ಕಾರಿ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ, ಒಂದು ಭಾಗದಲ್ಲಿ ಹಾಲಿನ ಡೈರಿ, ಅಂಬೇಡ್ಕರ್ ಭವನ, ಹಾಗೂ ಕಲ್ಯಾಣಿ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಎಲ್ಲರ ಒಪ್ಪಿಗೆಯಂತೆ ಸದರಿ ಸ್ಥಳದಲ್ಲಿ ಮಣ್ಣು ತುಂಬಿಸುವ ಕಾರ್ಯ ನಡೆಯುತ್ತಿದೆ. ಆದರೆ ಕೆಲವರು ವಿನಾಕಾರಣ ಸಮಸ್ಯೆ ಸೃಷ್ಠಿಸುತ್ತಿದ್ದಾರೆಂದರು.
ತಾಲ್ಲೂಕಾಡಳಿತದ ಮೌನ-ಗೊಂದಲಕ್ಕೀಡಾದ ಗ್ರಾಮಸ್ಥರು: ಗೊಂದಲದ ಸ್ಥಳಕ್ಕೆ ಸಂಬ0ಧಿಸಿದ0ತೆ, ತಹಸೀಲ್ದಾರ್ ರಶ್ಮಿ ಹಾಗೂ ಪಿಡಿಓ ಅಧಿಕಾರಿಗೆ ಮಾಹಿತಿ ಇದ್ದರೂ ಸರ್ಕಾರಿ ಸ್ಥಳವನ್ನು ರಕ್ಷಿಸದೇ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸದೇ ಇರುವುದರಿಂದ ಗ್ರಾಮಸ್ಥರ ನಡುವ ಗೊಂದಲ ಉಂಟಾಗಿ ವೈಮನಸ್ಸುಗಳಾಗಿ ಪರಿಣಮಿಸಿದೆ.
ಅರಣ್ಯಾಧಿಕಾರಿಗಳಿಗೆ ಪ್ರಶ್ನಿಸಿದ ಗ್ರಾಮಸ್ಥರು ತಬ್ಬಿಬ್ಬಾದ ಅಧಿಕಾರಿಗಳು: ಸ್ಥಳಕ್ಕೆ ದಾವಿಸಿದ ಅರಣ್ಯಾಧಿಕಾರಿಗಳು ಮರದ ಕೊಂಬೆಗಳನ್ನು ಕತ್ತರಿಸುವುದರಿಂದ ನಿಮ್ಮ ವಿರುದ್ದ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.
