
ಉದಯವಾಹಿನಿ ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಐದು ಗ್ಯಾರಂಟಿ ಯೋಜನೆಗಳನ್ನು ಭರವಸೆ ನೀಡಿ ನುಡಿದಂತೆ ನಡೆದಿದ್ದೇವೆ ಎಂಬ ಘೋಷಣೆಯ ಮುಖಾಂತರ ರಾಜ್ಯಾದ್ಯಂತ ಪ್ರಚಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಬಡ ಜನರಿಗೆ ನೀಡುತ್ತಿರುವ ಪಡಿತರ ಅಕ್ಕಿಯನ್ನು ಹತ್ತು ಕೆಜಿ ನೀಡುವಲ್ಲಿ ವಿಫಲವಾಗಿದ್ದು ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಖುದ್ದು ಆಹಾರ ಸಚಿವರೇ ಹತ್ತು ಕೆಜಿ ಅಕ್ಕಿ ನೀಡಲು ಆಗುವುದಿಲ್ಲ ಇದರ ಬದಲಾಗಿ ಹಣ ನೀಡುತ್ತೇವೆಂದು ಹೇಳಿರುವುದು ಹಾಸ್ಯಾಸ್ಪದ ಸಂಗತಿ ಎಂದು ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ . ನೆರೆ ರಾಜ್ಯಗಳಾದ ಆಂಧ್ರ ಪ್ರದೇಶದಲ್ಲಿ ಅಕ್ಕಿಗೆ ಹೆಚ್ಚಿನ ದರ ನಿಗದಿ ಪಡಿಸಿದ್ದು ಆ ಹಣ ನೀಡಲಾಗುವುದಿಲ್ಲ ಇದರ ಬದಲಾಗಿ ಪಡಿತರ ಕಾಡುದಾರರಿಗೆ 5 ಕೆಜಿ ಅಕ್ಕಿಯ ಬದಲಾಗಿ ಹಣ ವರ್ಗಾವಣೆ ಮಾಡಲಾಗುವುದೆಂದು ಹೇಳಿಕೊಂಡಿದ್ದಾರೆ. ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಪಡಿತರ ವಿತರಕರಿಗೆ 10 ಕೆಜಿ ಅಕ್ಕಿಯ ಕಮಿಷನ್ ಇಡುವಂತೆ ಪಡಿತರ ವಿತರಕರ ಸಂಘದಿಂದ ಆಗ್ರಹ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಆಹಾರ ಮಂತ್ರಿಗಳಾದ ಕೆಎಚ್ ಮುನಿಯಪ್ಪ ರವರಿಗೆ ಮನವಿ ನೀಡಿ ರಾಜ್ಯದಲ್ಲಿ ಪಡಿತರವಿತರಕರಿಗೆ ನೀಡುತ್ತಿರುವ ಕಮಿಷನ್ ತುಂಬಾ ಕಮ್ಮಿಯಾಗಿದ್ದು ಬೇರೆ ರಾಜ್ಯಗಳನ್ನು ಹೋಲಿಕೆ ಮಾಡಿಕೊಂಡದಲ್ಲಿ ಕರ್ನಾಟಕ ಮಾತ್ರ ಪಡಿತರ ವಿತರಕರಿಗೆ ಅತಿ ಕಮ್ಮಿ ಕಮಿಷನ್ ನೀಡುತ್ತಿದ್ದು ಪಡಿತರ ವಿತರಕರು ಸಂಕಷ್ಟದಲ್ಲಿದ್ದಾರೆ 10 ಕೆಜಿ ಅಕ್ಕಿ ನೀಡಲು ತೊಂದರೆಯಲ್ಲಿ ಅದರ ಬದಲಿಗೆ ಬೇಳೆಕಾಳು ಸಕ್ಕರೆ ವಿತರಣೆ ಮಾಡಬಹುದು ದಿನಬಳಕೆ ವಸ್ತುಗಳನ್ನು ಸಹ ಪಡಿತರ ವಿತರಕರ ಮೂಲಕ ಪಡಿತರ ಕಾಡುದಾರರಿಗೆ ತಲುಪಿಸಬಹುದು ಆದರೆ ರಾಜ್ಯ ಸರ್ಕಾರ ಪಡಿತರ ವಿತರಕರ ಬಗ್ಗೆ ಕಾಳಜಿ ವಹಿಸದಂತಾಗಿದೆ ಈ ಹಿಂದೆ ಮಾಡಿರುವ ಈಕೆ ವೈ ಸಿ ಹಣವು ಸಹ ಬಿಡುಗಡೆಯಾಗಿಲ್ಲ ಪ್ರತಿ ತಿಂಗಳು ಕಾಡುದಾರರಿಗೆ ಡಿಬಿ ಟಿ ಮುಖಾಂತರ ಹಣ ತಲುಪುವಂತೆ ಪಡಿತರ ವಿತರಕರಿಗೂ ಸಹ ಕಮಿಷನ್ ಅನ್ನು ಕೂಡಲೇ ಹೆಚ್ಚಳ ಮಾಡಿ ಪ್ರತಿ ತಿಂಗಳು ಡಿಬಿಟಿ ಮೂಲಕವೇ ಕಮಿಷನ್ ಹಣ ಪಡಿತರ ವಿತರಕರ ಖಾತೆಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಕೃಷ್ಣಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ ಸರ್ಕಾರ ಇದೇ ರೀತಿ ತಾತ್ಸಾರ ಮನೋಭಾವನೆ ಪಡಿತರ ವಿತರಕರ ಬಗ್ಗೆ ತೋರಿದಲ್ಲಿ ಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತಿದೆ ಎಂದು ಸಹ ಕೃಷ್ಣಪ್ಪ ಎಚ್ಚರಿಸಿದ್ದಾರೆ.

