
ಉದಯವಾಹಿನಿ ಸಿಂಧನೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಚೇತನ ಕುಮಾರ ಅವರು ತಾಲ್ಲೂಕು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಬಗ್ಗೆ ಪರಿಶೀಲನೆ ನಡೆಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಚೇತನ ಕುಮಾರ ತಾಲ್ಲೂಕಿನಲ್ಲಿ ಬರುವ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿ ದಾಖಲಾ ತಿಗಳನ್ನು ಪರಿಶೀಲನೆ ಮಾಡಿದರು. ತಾಲ್ಲೂಕಿನ ಅರಗಿನಮರ ಕ್ಯಾಂಪ, ಆ ಹೆಚ್ ನಂ.1.ಈರಣ್ಣ ಕ್ಯಾಂಪ, ಆರ ಹೆಚ್ ನಂ 2,ಅಂಗನವಾಡಿ ಕೇಂದ್ರಗಳನ್ನು ನೋಡಿ ನಂತರ ನಗರದ ಕೇಂದ್ರ ಗಳಿಗೆ ಬೇಟಿ ಮಾಡಿ ಸರ್ಕಾರದ ಸೌಲಭ್ಯಗಳನ್ನು ಮಹಿಳೆ ಹಾಗೂ ಮಕ್ಕಳಿಗೆ ತಲುಪಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಉಪನಿರ್ದೇಶಕರಾದ ಚೇತನ ಕುಮಾರ ಸೂಚನೆ ನೀಡಿದರು. ಉಪನಿರ್ದೇಶಕರು ಬಂದ ಸುದ್ದಿ ಕೇಳಿದ ಅಂಗನವಾಡಿ ಕಾರ್ಯ ಕರ್ತೆಯರು ತಮ್ಮ ಕೇಂದ್ರ ಗಳಲ್ಲಿ ಇದ್ದು ಕರ್ತವ್ಯ ನಿರ್ವಹಿಸುತ್ತಾ ನಮ್ಮ ಕೇಂದ್ರ ಕ್ಕೆ ಅಧಿಕಾರಿಗಳು ಬಂದರೆ ಅಗತ್ಯ ದಾಖಲಾತಿಗಳನ್ನು ತೋರಿಸಲು ಸಕಲ ಸಿದ್ಧತೆ ಮಾಡಿ ಕೊಂಡು ತಮ್ಮಅಧಿಕಾರಿ ದಾರಿಯನ್ನು ಎದರು ನೋಡ ತೊಡಗಿದರು. ಶಾಲಾ ಪೂರ್ವ ಶಿಕ್ಷಣ ಪರಿಶೀಲನೆ ಮಾಡಿ ದಾಖಲಾತಿ ಮಕ್ಕಳ ಹಾಜರಾತಿ ಹೆಚ್ಚಿಸಿ ಗುಣಾತ್ಮಕ ಶಿಕ್ಷಣ ನೀಡುವಂತೆ ಅಂಗನವಾಡಿ ಕಾರ್ಯ ಕರ್ತೆಯರಿಗೆ ಚೇತನ ಕುಮಾರ ಹೇಳುವ ಮೂಲಕ ಅಂಗನವಾಡಿ ಮಕ್ಕಳ ಕಶೋಲೊಪ ಚರಿ ವಿಚಾರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಸಿಡಿಪಿಒ ಲಿಂಗನಗೌಡ ಹಾಗೂ ಅಂಗನವಾಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗ ಅಂಗನವಾಡಿ ಕೇಂದ್ರದ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
