ಉದಯವಾಹಿನಿ, ನವದೆಹಲಿ: ಪ್ಯಾಲೆಸ್ತೇನ್‌ಗೆ ಭಾರತ ವೈದ್ಯಕೀಯ ನೆರವಿನ ಹಸ್ತ ಚಾಚಿದ್ದು, ಭಾರತದಿಂದ ಪ್ಯಾಲೆಸ್ತೇನ್‌ಗೆ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಿಮಾನ ಭಾರತದಿಂದ ಪಯಣಿಸಿದೆ. ಉತ್ತರ ಪ್ರದೇಶದ ಗಾಝಿಯಾಬಾದ್‌ನ ವಾಯುನೆಲೆಯಿಂದ ಈ ವಿಮಾನ ಹೊರಟಿದ್ದು, ಈ ವಿಮಾನದಲ್ಲಿ ಲ್ಯಾಲಸ್ತೇನ್ ಜನರಿಗಾಗಿ ೬.೫ ಟನ್ ವೈದ್ಯಕೀಯ ಸಾಮಗ್ರಿಗಳು ಮತ್ತು ೩೨ ಟನ್ ವಿಪತ್ತು ಪರಿಹಾರ ಸಾಮಗ್ರಿಗಳಿದ್ದು, ಈ ವಿಮಾನ ಈಜಿಪ್ಟ್‌ನ ಎಲ್ ಅರೀಶ್ ವಿಮಾನನಿಲ್ದಾಣದಲ್ಲಿ ಇಳಿಯಲಿದೆ. ಅಲ್ಲಿಂದ ಈ ವೈದ್ಯಕೀಯ ಸಾಮಗ್ರಿಗಳನ್ನು ಪ್ಯಾಲೆಸ್ತೇನ್‌ಗೆ ಕಳುಹಿಸಲಾಗುತ್ತದೆ.ಭಾರತ ಪ್ಯಾಲೆಸ್ತೇನ್‌ಗೆ ಔಷಧಿಗಳು, ಶಸ್ತ್ರ ಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಹೊದಿಕೆ, ನೈರ್ಮಲ್ಯ ಉಪಕರಣಗಳು, ನೀರು ಶುದ್ಧೀಕರಣ ಮಾತ್ರೆಗಳು ಇತರ ಅವಶ್ಯ ವಸ್ತುಗಳನ್ನು ಕಳುಹಿಸಿದೆ.
ವೈದ್ಯಕೀಯ ನೆರವಿನ ಬಗ್ಗೆ ಪ್ರಧಾನಿಯವರು ಪ್ಯಾಲಸ್ತೇನ್ ಪ್ರಾಧಿಕಾರದ ಅಧ್ಯಕ್ಷ ಮೊಹ್ಮದ್ ಅಬ್ಬಾಸ್‌ರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮಾನವೀಯ ನೆಲೆಯಲ್ಲಿ ಭಾರತವು ಪ್ಯಾಲೆಸ್ತೇನ್ ಜನರಿಗೆ ನೆರವು ಒದಗಿಸುವುದನ್ನು ಮುಂದುವರೆಸಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!