ಉದಯವಾಹಿನಿ, ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ‘ಭವಿಷ್ಯದ ಪ್ರಧಾನಿ’ ಎಂದು ಬಿಂಬಿಸಲಾದ ಪೋಸ್ಟರ್‌ಗಳನ್ನು ಲಖನೌದ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಹಾಕಲಾಗಿದೆ. ಜುಲೈ 1ರಂದು ಅಖಿಲೇಶ್ ಯಾದವ್ ಅವರ ಹುಟ್ಟುಹಬ್ಬ. ಅವರು (ಅಖಿಲೇಶ್ ಯಾದವ್) ದೇಶದ ಪ್ರಧಾನಿಯಾಗಲಿ ಮತ್ತು ಜನರ ಸೇವೆ ಮಾಡಲಿ ಎಂದು ಪಕ್ಷದ ಕಾರ್ಯಕರ್ತರು ಪ್ರಾರ್ಥಿಸುತ್ತಿದ್ದಾರೆ.
ಈ ಹಿನ್ನಲೆ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ಪಕ್ಷದ ವಕ್ತಾರ ಫಕ್ರುಲ್ ಹಸನ್ ಚಾಂದ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವವಾದಿ ಪಕ್ಷವು ಕೇಂದ್ರದ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಭಾಗವಾಗಿದೆ. ಈ ಮೈತ್ರಿಕೂಟದಲ್ಲಿ 28 ರಾಜಕೀಯ ಪಕ್ಷಗಳ ಗುರುತಿಸಿಕೊಂಡಿವೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲು ‘ಇಂಡಿಯಾ’ ಕೂಟ ಸಜ್ಜಾಗುತ್ತಿದೆ. ಆದರೆ, ಮೈತ್ರಿಯು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಿಲ್ಲ.
ಪೋಸ್ಟರ್ ಅಳವಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಡ್ಯಾನಿಶ್ ಆಜಾದ್ ಅನ್ಸಾರಿ, ‘ಹಗಲು ಕನಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಒಬ್ಬರ ಸಾಮರ್ಥ್ಯಕ್ಕೆ ತಕ್ಕಂತೆ ಕನಸು ಕಾಣಬೇಕು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇಶದ ಜನತೆ ಪ್ರಧಾನಿ ಮೋದಿಯನ್ನು ನಂಬಿದ್ದಾರೆ. ದೇಶದ ಜನರು ಖಂಡಿತವಾಗಿಯೂ ಪ್ರಧಾನಿ ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡುತ್ತಾರೆ’ ಎಂದು ಹೇಳಿದ್ದಾರೆ.
