ಉದಯವಾಹಿನಿ, ನವದೆಹಲಿ, ದೇಶದಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ “ಒಂದು ದೇಶ ಒಂದು ಚುನಾವಣೆ” ನಡೆಸುವ ಸಾಧ್ಯತೆಗಳ ಕುರಿತ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಮತ್ತು ಕಾನೂನು ಆಯೋಗದ ಸದಸ್ಯರು ಭೇಟಿ ಮಾಡಿ ಚರ್ಚೆ ನಡೆಸಲು ಮುಂದಾಗಿದ್ದಾರೆ.
ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗದ ಸದಸ್ಯರು ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧಕ ಬಾದಕ ಕುರಿತು ಸಮಾಲೋಚನೆ ನಡೆಸಲಿದೆ.
ಕಾನೂನು ಆಯೋಗವೂ ಸಹ ಏಕಕಾಲದಲ್ಲಿ ಚುನಾವಣೆಯನ್ನು ಸಾಧ್ಯವಾಗಿಸುವ ಮಾರ್ಗಗಳನ್ನು ಶಿಫಾರಸು ಮಾಡುವ ವರದಿಯನ್ನು ಪೂರ್ಣಗೊಳಿಸಲು ಪರಿಶೀಲಿಸುತ್ತಿದೆ. ೨೦೧೮ ರಲ್ಲಿ ಅದರ ಹಿಂದಿನ ಚರ್ಚೆಗಳು ರಾಜಕೀಯ ಪಕ್ಷಗಳ ನಡುವೆ ಒಮ್ಮತದ ಕೊರತೆಯೊಂದಿಗೆ ಹಾಗೆ ಉಳಿದಿವೆ. ಒಂದು ರಾಷ್ಟ್ರ-ಒಂದು ಚುನಾವಣೆ ನಡೆಸುವ ಸಂಬಂಧ ಸೆಪ್ಟೆಂಬರ್ ಆರಂಭದಲ್ಲಿ ಕೇಂದ್ರ ಸರ್ಕಾರ ಮಾಜಿ ರಾಷ್ಡ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚಿಸಿಧ ಶಾಸಕಾಂಗ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿಯಿಂದ ಚುನಾವಣಾ ಕಾನೂನುಗಳಿಗೆ ಮಾರ್ಗದರ್ಶನ ನೀಡುವ ಅಸ್ತಿತ್ವದಲ್ಲಿರುವ ಸಾಂವಿಧಾನಿಕ ನಿಬಂಧನೆಗಳ ಬಗ್ಗೆ ಮಾಜಿ ರಾಷ್ಟ್ರಪತಿ ಅವರಿಗೆ ವಿವರ ನೀಡಲಾಗಿತ್ತು.
