ಉದಯವಾಹಿನಿ, ಕಿನ್ಯಾಸಾ: ಕಾಂಗೋ ನದಿಯಲ್ಲಿ ದೋಣಿಯೊಂದಕ್ಕೆ ಬೆಂಕಿ ತಗುಲಿ ಕನಿಷ್ಠ ೧೬ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದೋಣಿಯಲ್ಲಿ ಇಂಧನವನ್ನು ಸಾಗಿಸಲಾಗುತ್ತಿತ್ತು. ರಾಜಧಾನಿ ಕಿನ್ಯಾಸಾದ ಪೂರ್ವ ಭಾಗದಿಂದ ಎಂಬಾಂಡಕ ನಗರಕ್ಕೆ ದೋಣಿ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ. ಈ ದುರಂತದಲ್ಲಿ ಕನಿಷ್ಠ ೧೧ ಜನರನ್ನು ರಕ್ಷಿಸಲಾಗಿದೆ. ಕೆಲವರು ನಾಪತ್ತೆಯಾಗಿರುವ ಶಂಕೆ ಇದ್ದು, ಯಾವುದೇ ಸ್ಪಷ್ಟ ಮಾಹಿತಿ ಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಎರಡು ದಿನಗಳ ಹಿಂದಷ್ಟೇ ಇದೇ ಕಾಂಗೋ ನದಿಯಲ್ಲಿ ದೋಣಿ ಮುಳುಗಿ ೪೦ ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಮರೆಯುವ ಮುನ್ನವೇ ಇಂಥದ್ದೇ ಮತ್ತೊಂದು ದುರಂತ ನಡೆದಿದೆ. ಸಾಮಾನ್ಯವಾಗಿ ಓವರ್ ಲೋಡ್ ಆಗುವ ತಾತ್ಕಾಲಿಕ ಬೋಟ್ ಗಳ ಬಳಕೆಯಿಂದಾಗಿ ಇಂತಹ ದುರಂತಗಳು ಇಲ್ಲಿ ಸಾಮಾನ್ಯವಾಗಿವೆ ಎಂದು ವರದಿಯಾಗಿದೆ.
ದೇಶದ ವಾಯುವ್ಯ ಭಾಗದ ಬಹುಪಾಲು ಜನರು ಉತ್ತಮ ರಸ್ತೆಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರು ಸಾರಿಗೆಗಾಗಿ ಕಾಂಗೋ ನದಿಯನ್ನು ಬಳಸುತ್ತಾರೆ. ನದಿ ಮಾರ್ಗದ ಪ್ರಯಾಣ ಕಡಿಮೆ ಖರ್ಚಾಗಿರುವುದರಿಂದ ಇಲ್ಲಿನ ಜನರು ಹೆಚ್ಚಾಗಿ ದೋಣಿಗಳನ್ನು ಬಳಸುತ್ತಾರೆ.
ದೇಶದ ಪಶ್ಚಿಮದಲ್ಲಿ, ಸ್ಥಳೀಯರಲ್ಲಿ ಇಂತಹ ಅಪಘಾತಗಳು ಹೆಚ್ಚು ಸಾಮಾನ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!