
ಉದಯವಾಹಿನಿ,ಚಿಂಚೋಳಿ : ತಾಲ್ಲೂಕಿನ ಸುಲೇಪೇಟ ಗ್ರಾಮದದಿಂದ ಎಲಕಪಳ್ಳಿ,ಹೂವಿನಭಾವಿ,ಪಸ್ತಾಪುರ,ಮೋ ಘಾ ಗ್ರಾಮಗಳಿಗೆ ಹೋಗುವ ಡಾಂಬರಿಕರಣ ರಸ್ತೆಗಳು ಹದಗೆಟ್ಟು ಹೋಗಿ ದೊಡ್ಡ ದೊಡ್ಡ ತೆಗ್ಗುಗುಂಡಿಗಳು ಬಿದ್ದಿವೆ ಇದರಿಂದ ಸುಲೇಪೇಟ ಗ್ರಾಮಕ್ಕೆ ವ್ಯಾಪಾರ ವಹಿವಾಟು ಹಾಗೂ ಶಾಲಾಕಾಲೇಜು ಆಸ್ವತ್ರೆಗೆ ತೆರಳಲು ಸಾರ್ವಜನಿಕರಿಗೆ ವಿಧ್ಯಾರ್ಥಿಗಳಿಗೆ ದಿನಾಲು ಹೋಗಿ ಬರಲು ತುಂಬಾ ತೊಂದರೆ ಅನುಭವಿಸಬೇಕಾಗುತ್ತಿದೆ ಎಂದು ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಮತಕ್ಷೇತ್ರದ ಸುಲೇಪೇಟ ಗ್ರಾಮದಿಂದ ಹೋಗುವ ಎಲಕಪಳ್ಳಿ,ಹೂವಿನಭಾವಿ,ಪಸ್ತಾಪುರ ಮೋಘಾ,ಗ್ರಾಮಗಳ ಡಾಂಬರಿಕರಣ ರಸ್ತೆಯು ಹುಮನಾಬಾದಗೆ ಹೋಗುತ್ತದೆ ಮಧ್ಯದಲ್ಲಿ ಕ್ಷೇತ್ರದ ಅನೇಕ ಗ್ರಾಮಗಳ ಸಾರ್ವಜನಿಕರು ದಿನಾಲು ವ್ಯಾಪಾರ ವಹಿವಾಟುಗೆ ಶಾಲಾಕಾಲೇಜು ಆಸ್ವತ್ರೇಗೆ ಸುಲೇಪೇಟ ಗ್ರಾಮಕ್ಕೆ ಬರುವುದು ಸಹಜ ಆದರೆ ಮಧ್ಯೆದಲ್ಲಿ 1-2ಕಿಮೀ ರಸ್ತೆ ಮಾಡಿದ್ದು ಬಿಟ್ಟರೆ ಉಳಿದ ರಸ್ತೆಯುದ್ದಗಲಕ್ಕೂ ದೊಡ್ಡ ದೊಡ್ಡ ತೆಗ್ಗುಗುಂಡಿಗಳು ಬಿದ್ದಿರುವುದರಿಂದ ಹಿರಿಯರಿಗೆ,ಅನಾರೋಗ್ಯ ಇದ್ದವರಿಗೆ,ಸಮಯಕ್ಕೆ ಶಾಲಾಕಾಲೇಜುಗೆ ವಿದ್ಯಾರ್ಥಿಗಳು ತೆರಳಲು ಅನಾನುಕೂಲ ಹಾಗೂ ಬಹಳಷ್ಟು ತೊಂದರೆ ಆಗುತ್ತಿದರು ಮಾತ್ರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಏಚ್ಚೇತುಕೊಳ್ಳದೆ ಗಾಢನಿದ್ರೆಯಲ್ಲಿದ್ದಾರೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
