ಉದಯವಾಹಿನಿ, ಸಿಂಧನೂರು : ನಗರದ ಬ್ರಾಹ್ಮಣ ಓಣಿಯಲ್ಲಿರುವ ಶ್ರೀರಾಮ ದೇವರ ಮಂದಿರದಲ್ಲಿ ಅಯ್ಯೋಧ್ಯೆ ರಾಮಚಂದ್ರ ಸ್ವಾಮಿ ಪುನ: ಪ್ರತಿಷ್ಠಾಪನಾ ಅಂಗವಾಗಿ ಶತಕೋಟಿ ರಾಮಜಪ ಮಹಾಯಜ್ಞ ಹಾಗೂ ತಾರಕ ಮಹಾಯಾಗ ಸಂಕಲ್ಪ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಅಧ್ಯಾಪಕ ಕೋಪ್ರೇಶಾಚಾರ್ ಮಾತನಾಡಿ ಶ್ರೀರಾಮ ಉತ್ತಮ ಆಡಳಿತಗಾರ, ಪ್ರಜಾರಕ್ಷಕ, ಪಿತೃ ವಾಕ್ಯ ಪರಿಪಾಲಕ, ಸತ್ಯ, ಆದರ್ಶ, ನ್ಯಾಯ ಮಾರ್ಗದ ಪ್ರತಿಪಾದಕ ಇತನ ಸತ್ಯ ಸಂಕಲ್ಪ ಎಲ್ಲರಿಗು ಆದರ್ಶವಾಗಲಿ ಎಂದು ಹೇಳಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿಣಿ ಮಂಡಳಿ ಸದಸ್ಯ ನರಸಿಂಹ, ಪ್ರದಾನ ಸಂಚಾಲಕ ಮನೋಹರ್ ರಾವ್, ರಾಘವೇಂದ್ರ ರಾವ್ ಕಲ್ಕರ್ಣಿ, ಗೋವಿಂದರಾವ್, ರಾಜುಬಂಡಿ ವಕೀಲ, ಹನುಮಂತಾಚಾರ್ ಮಸ್ಕಿ, ವೆಂಕಟೇಶಚಾರ್ ಕೆಂಗಲ್, ವಿರುಪಣ್ಣ ಗುಡಿ, ಉಮೇಶ ಗೋಮರ್ಸಿ, ಕಾವೇರಿ ಕುಲ್ಕರ್ಣಿ, ಲಕ್ಷ್ಮಿ ಸೇರಿದಂತೆ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
