ಉದಯವಾಹಿನಿ, ಔರಾದ್ : ರೈತರ ಹೊಲಗಳಿಗೆ ಸರ್ಮಪಕ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಎಕಲಾರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಶಂಕರ ಮಣಿಗೆಂಪೂರೆ, ಎಕಲಾರ ಗ್ರಾಪಂ ವ್ಯಾಪ್ತಿಯ ರೈತರ ಹೊಲಗಳಿಗೆ ಹೋಗಲು ರಸ್ತೆಗಳಿಲ್ಲದ ಕಾರಣ ಪಂಚಾಯತ ನಕ್ಷೆಯಂತೆ ರಸ್ತೆ ಕಲ್ಪಿಸಬೇಕು. ನಿರಂತರ ಮೂರು ವರ್ಷಗಳಿಂದ ಸಂಬAಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿವರೆಗೂ ರಸ್ತೆ ನಿರ್ಮಾಣದ ವಿಚಾರವಾಗಿ ಅಧಿಕಾರಿಗಳು ಕ್ರಮವಹಿಸದೇ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಎಕಲಾರ ಗ್ರಾಮದ ಪ್ರಕಾಶ ಹಿಪ್ಪಳಗಾವೆ ಮಾತನಾಡಿ, ರಸ್ತೆಗಳಿಲ್ಲದೇ ರೈತರು ಪ್ರತಿಯೊಂದು ವಿಷಯದಲ್ಲಿ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ರೈತರ ಗೋಳು ಕೇಳುರ‍್ಯಾರು ಎಂದು ಪ್ರಶ್ನಿಸಿದರು. ರತ್ನದೀಪ ಕಸ್ತೂರೆ ಮಾತನಾಡಿ, ಸಂಬಂಧಿತ ಅಧಿಕಾರಿಗಳ ನಿರ್ಲಕ್ಷö್ಯತನ ಸಹಿಸಲಾಗದು, ೮ ದಿನಗಳ ಒಳಗೆ ನಕ್ಷೆ ಪ್ರಕಾರ ರಸ್ತೆ ಹದಬಸ್ತು ಮಾಡದಿದ್ದಲ್ಲಿ, ಎಡಿಎಲ್‌ಆರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಗಂಗಶೆಟ್ಟಿ ಬಿರಾದಾರ್, ಸಂಜುಕುಮಾರ್, ಬಕ್ಕಪ್ಪ, ಕಲ್ಲಪ್ಪ ಮುದಾಳೆ, ಗಣಪತರಾವ ಜೀರ್ಗೆ, ರಾಜಕುಮಾರ್ ಬಿರಾದಾರ್, ಶಿವಾನಂದ ಸ್ವಾಮಿ, ಗಣಪತಿ, ನಾಗೇಶ ಪಾಟೀಲ್, ಬಸವಣಪ್ಪ ಸ್ವಾಮಿ, ಶಿವಕುಮಾರ್ ಶೆಟ್ಟೆಪ್ಪ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಶಿವಕುಮಾರ್ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!