ಉದಯವಾಹಿನಿ ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಹೋಬಳಿಯ ದೋಣಿಮಡಗು ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರಾದ ಮಂಜುಳ ಎಸ್, ಕೆ ,ಜಯಣ್ಣ ರವರ ಅಧ್ಯಕ್ಷತೆಯಲ್ಲಿ ಪೂಜೆ ನಡೆಸಿ ಸ್ತಬ್ಧ ಚಿತ್ರ ಮೆರವಣಿಗೆ ಮುಖಾಂತರ ಅದ್ದೂರಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಬಗ್ಗೆ ಜಯಣ್ಣ ನವರು ಮಾತನಾಡಿ ವಾಲ್ಮೀಕಿಯವರು ಮೂಲ ಹೆಸರು ರತ್ನಾಕರ ಮೂಲ ಒಬ್ಬ ಕಳನಾಗಿದ್ದು ಪ್ರಾಣಿ ಹಿಂಸೆ ಮಾಡುತ್ತಿದ್ದನು, ಒಬ್ಬ ನಾರದ ಮಹರ್ಷಿಗಳ ಕೃಪೆಯಿಂದ ಮನಪರಿವರ್ತನೆಯಾಗಿ ತನ್ನ ಹಿಂಸಾತ್ಮಕ ಮನೋಭಾವನೆಯನ್ನು ತೊರೆದು ಮಾನವನಾಗಿ ಮಾರ್ಪಡಿ ಧನು ಕಾಮ ಲೋಕದ ಉತ್ತರ ತ್ಯಜಿಸಿ ಸನ್ಯಾಸಿಯಾಗಿ ತಪಸ್ಸಿಗೆ ಕುಳಿತು ವಾಲ್ಮೀಕಿ ಮಹರ್ಷಿಯಾಗಿ ಪರಿವರ್ತನೆಗೊಂಡ ರಾಮಾಯಣ ರಚಿಸುವುದರ ಮೂಲಕ ವಿಶ್ವ ಇತಿಹಾಸದ ಪುಟವಾಗಿ ನಿಂತಿದ್ದಾರೆ.
ರಾಮಾಯಣ ಮಹಾಕಾವ್ಯ ದಲ್ಲಿ ಒಬ್ಬ ರಾಜನಾದವನು ಸಮಾಜಮುಖವಾಗಿ ಹಾಗೆ ನಡೆದು ಕೊಳ್ಳಬೇಕೆಂದು ರಾಮನ ರೂಪದಲ್ಲಿ ಚಿತ್ರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ .ಪಿಡಿಒ ,ವಸಂತ್ ಕುಮಾರ್, ಚಿನ್ನಪ್ಪ, ಸದಸ್ಯರಾದ ನಾರಾಯಣಸ್ವಾಮಿ, ಮಂಜುಳಾ, ಮಹಾದೇವ್, ಕೃಷ್ಣಪ್ಪ, ಸಂತೋಷ್ ,ಬಸವರಾಜ್, ನಾಗಲಮುದ್ದಮ್ಮ ನಾಗರತ್ನಮ್ಮ , ಸಿಬ್ಬಂದಿ ,ಸುಬ್ರಮಣಿ ರಾಧಾಕೃಷ್ಣ, ಚಂದ್ರು ,ಮಧು, ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!