ಉದಯವಾಹಿನಿ ಸಿಂಧನೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 7ರಾಗಿ ಕ್ಯಾಂಪ್ . ಶಾಲೆಯಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಲೆಯಲ್ಲಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ರಾಜೇಂದ್ರ ಕುಮಾರ್ ಅವರು ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ ಅಂತಹ ಮಹಾಕವಿ ಅವರ ತತ್ವ ಸಿದ್ಧಾಂತಗಳನ್ನು ಆದರ್ಶ ಗುಣಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಅವರ ಆಯ್ಕೆ ಕೊಟ್ಟು ಮಾರ್ಗದಲ್ಲಿ ನಡೆಯೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ. S D M C ಅಧ್ಯಕ್ಷರಾದ ಕನಕಪ್ಪ ಸದಸ್ಯರಾದ ಚನ್ನಪ್ಪ ಶಿವರಾಜ ರಮೇಶ ಶಿಕ್ಷಣ ಪ್ರೇಮಿಗಳಾದಂತಹ ಊರಿನ ಮುಖಂಡರ ಮೌನೇಶ್ ನಾಯಕ್ ದಯಾನಂದ ಸಿದ್ದಪ್ಪ ಸಾಧಿಕ್ ಸಣ್ಣ ಮೌನೇಶ ಹಾಗೂ ಶಾಲೆ ಶಿಕ್ಷಕರಾದ ಶ್ರೀ ಜೋಸೆಫ್ ಶ್ರೀಮತಿ ಜಲಜಾ ಎಂ ಅತಿಥಿ ಶಿಕ್ಷಕರಾದಂತ ದ್ಯಾಮಣ್ಣ ಅಶ್ವಿನಿ ಮತ್ತು ಮುದ್ದು ಮಕ್ಕಳು ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯತು..

Leave a Reply

Your email address will not be published. Required fields are marked *

error: Content is protected !!