ಉದಯವಾಹಿನಿ, ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ೨೦೦ ಕೋಟಿ ನೀಡದಿದ್ದರೆ ಹತ್ಯೆ ಮಾಡುವುದಾಗಿ ಇ-ಮೇಲ್‌ನಲ್ಲಿ ಜೀವ ಬೆದರಿಕೆ ಹಾಕಿರುವ ಸಂಗತಿ ಬಯಲಾಗಿದೆ. ದೇಶದ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರಿಗೆ ಕೇಂದ್ರ ಸರ್ಕಾರ ಈಗಾಗಲೇ ಝೆಡ್ ಫ್ಲಸ್ ಭದ್ರತೆ ಒದಗಿಸಿದೆ. ಹೀಗಿರುವಾಗ ೨೦೦ ಕೋಟಿ ರೂಪಾಯಿ ನೀಡದಿದ್ದರೆ ಗುಂಡಿಟ್ಟು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್ ನಲ್ಲಿ ಬಂದ ಬೆದರಿಕೆ ಕರೆ ಆಧರಿಸಿ ತನಿಖೆ ಕೈಗೊಳ್ಳಲಾಗಿದೆ. ಜೊತೆಗೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾರಿ ಇಮೇಲ್ ಕಳುಹಿಸಿದ ವ್ಯಕ್ತಿ ತನ್ನ ಹಿಂದಿನ ಇಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ತನ್ನ ಬೇಡಿಕೆಯನ್ನು ೨೦ ಕೋಟಿಯಿಂದ ೨೦೦ ಕೋಟಿಗೆ ಏರಿಸಿದ್ದಾನೆ ಎಂದು ತಿಳಿಸಿದ್ದಾರೆ.
“ಇದೇ ಖಾತೆಯಿಂದ ಮತ್ತೊಂದು ಇಮೇಲ್ ಬಂದಿದ್ದು ಈ ಹಿಂದಿನ ನಮ್ಮ ಇಮೇಲ್‌ಗೆ ಪ್ರತಿಕ್ರಿಯಿಸಿಲ್ಲ ಈಗ ಮೊತ್ತ ೨೦೦ ಕೋಟಿ ಇಲ್ಲದಿದ್ದರೆ ಸಾವು ಖಚಿತ ಎಂದು ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
