ಉದಯವಾಹಿನಿ ಮುದಗಲ್ : ನನ್ನ ಮೇಲೆ ಆರೋಪ ಮಾಡಿರುವುದಕ್ಕೆ ರಾಜಕೀಯ ಪ್ರೇರಣೆ ಶಕ್ತಿ ಕಾರಣ ಎಂದು ಹುಸೇನಿ ಆಲಂ ಆಶೂರ್ ಖಾನ ದರ್ಗಾ ಕಮಿಟಿ ಕಾರ್ಯದರ್ಶಿ ಮಹಮ್ಮದ್ ಸಾಧಿಕಲಿ ರವಿವಾರ ಹೇಳಿದರು. ಹುಸೇನಿ ಆಲಂ ದರ್ಗಾದ ಯಾತ್ರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಭಾಷಾ ಹುಸೇನಿ ಆಲಂ ದರ್ಗಾ ಭೇಟಿ ನೀಡಿದ ಸಂದರ್ಭದಲ್ಲಿ ವರ್ಗ ಕಮಿಟಿಯ 11 ಜನ ಸದಸ್ಯರಲ್ಲಿ, ಏಳು ಜನ ಒಮ್ಮತ ನಿರ್ಧಾರದಿಂದ ಬೇಸತ್ತು, ಲೆಕ್ಕಪತ್ರ ನೀಡಿದ ಕಾರಣ ರಾಜೀನಾಮೆ ಸಲ್ಲಿಸಿರುತ್ತಾರೆ. ಜಮಾತಿನ ಆಯ್ಕೆ ಪ್ರಕ್ರಿಯ ಪ್ರಕಾರ ಹೊಸ ಸದಸ್ಯರ ಸಮಿತಿ ರಚನೆ ಮಾಡಬೇಕೆಂದು ಒತ್ತಾಯ ಮಾಡಿರುವುದು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಮುಖಾಂತರ ತಿಳಿದ ವಿಷಯವಾಗಿದೆ.
ಲೆಕ್ಕಪತ್ರ ತೋರಿಸಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ. ನನ್ನಲ್ಲಿ ಎಲ್ಲಾ ರೀತಿಯಿಂದ ಕರ್ನಾಟಕ ವಕ್ಫ ಬೋರ್ಡ್ ಅಡಿಟ್ ಮಾಡಿರುವಂತಹ ದಾಖಲೆಗಳು ನಮ್ಮ ಕಚೇರಿಯಲ್ಲಿ ಲಭ್ಯಇವೆ, ಯಾರಿಗಾದರೂ ಅನುಮಾನಗಳು ಇದ್ದಲ್ಲಿ ಸಾರ್ವಜನಿಕರಾಗಲಿ, ಸದಸ್ಯರು ನೇರವಾಗಿ ಬಂದು ನನ್ನ ಹತ್ತಿರ ಇರುವಂತ ದಾಖಲೆಗಳನ್ನು ಪರಿಶೀಲಿಸ ಬಹುದಾಗಿದೆ, ಸತ್ಯತೆಯನ್ನು ಅರಿಯದೆ ತಪ್ಪಾಗಿ ತಿಳಿದು ಆರೋಪ ಮಾಡುವುದರ ಬದಲು, ನಾವು ಧಾರ್ಮಿಕತೆಯಲ್ಲಿ ಸೇವಾ ಮನೋಭಾವ ಹೊಂದಾ ಬೇಕು ವಿನಹ ಈ ರೀತಿ ಆರೋಪ ನೀಡುವುದು ಎಷ್ಟರಮಟ್ಟಿಗೆ ಸತ್ಯವಾದದ್ದು ಹಾಗೂ ಹೊಸ ಸಮಿತಿ ರಚನೆ ಮಾಡಲು ಪಟ್ಟಣದ ಮಸೀದಿಗಳಲ್ಲಿ ಪ್ರಕಟಣೆ ಕಳುಹಿಸಿಕೊಟ್ಟು ಸುಮಾರು ಎಂಟು ತಿಂಗಳವರೆಗೂ ಇಲ್ಲಿಯವರೆಗೂ ಯಾರು ಆಸಕ್ತಿ ತೋರಿಸಿಲ್ಲ. ಮಂಡಳಿಯಿಂದ ಅಂಗವಿಕರಿಸಲ್ಪಟ್ಟ ಖಾತೆಗಗಳು ಮತ್ತು ಅಡಿಟ್ ಮಾಡಿರುವ ದಾಖಲೆಗಳು ಸದಾಕಾಲ ಒದಗಿಸಲು ಸಿದ್ಧನಿದ್ದೇನೆ, ಬಯಸುವ ನಾನು ಇನ್ನು ಮುಂದೆ ನನ್ನ ಮೇಲೆ ಆರೋಪಗಳು ಬಂದಲ್ಲಿ ಮಾನ ನಷ್ಟ ಮೊಕ್ಕದ್ದಮ್ಮೆ ಹೂಡಲು ಕಾನೂನು ಕ್ರಮ ಜರುಗಿಸುವುದಕ್ಕೆ ಹಿಂದಿರುವುದಿಲ್ಲ ಎಂದು ಪತ್ರಿಕೆಗೆ ಹೇಳಿದರು.ಈ ಸಂದರ್ಭದಲ್ಲಿ ಅಮೀರಬೇಗಂ ಹುಸ್ತಾದ ,ಸಾದೀಕ್ ಅಲಿ, ಮಾಸುಮ್ ಸೇರಿಪ್, ಗಯಾಸ್ ಹುದ್ದೀನ್,ಮಂಡಿ ಖಾಜಹುಸೇನ್ ಸಾಬ , ಸಾಬ,ಇತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!