
ಉದಯವಾಹಿನಿ ಚಿಂತಾಮಣಿ:ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಅತಿ ಹೆಚ್ಚಾಗಿ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತ್ತಿದ್ದರು ಬ್ರೇಕ್ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.ಖಚಿತ ಮಾಹಿತಿ ಮೇರೆಗೆ ನಗರದ ಬಂಬೂಬಜಾರ್ ನಲ್ಲಿ ಅಕ್ರಮವಾಗಿ ಗ್ಯಾಸ್ ರಿಫಲ್ಲಿಂಗ್ ನಡೆಯುತ್ತಿದ್ದನ್ನು ಸೆರೆ ಹಿಡಿಯಲು ಮಾಧ್ಯಮದವರು ಹೋದಾಗ ದಂಧೆ ನಡೆಸುತ್ತಿದ್ದ ವ್ಯಕ್ತಿಗಳು ಪರಾರಿ ಯಾಗಿದ್ದಾರೆ.ನಗರದ ಹಲವು ಸ್ಥಳಗಳಲ್ಲಿ ಗ್ಯಾಸ್ ರಿಫಲ್ಲಿಂಗ್ ದಂಧೆ ರಾಜಾ ರೋಷವಾಗಿ ನಡೆಯುತ್ತಿರುವುದರಿಂದ ಅನಾಹುತಗಳಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ.ಈ ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಗ್ಯಾಸ್ ರಿಫಲ್ಲಿಂಗ್ ದಂಧೆ ನಡೆಸುತ್ತಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
