ಉದಯವಾಹಿನಿ ಬೆಂಗಳೂರು: ರಾಜ್ಯ ಸರ್ಕಾರದ ಕೆಲವು ನಿಯಮಗಳನ್ನು ವಿರೋಧಿಸಿ ಮತ್ತು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘ ಬರುವ ನವಂಬರ್ ತಿಂಗಳು 7ನೇ ತಾರೀಕು ರಾಜ್ಯಾದ್ಯಂತ 20,000ಕ್ಕೂ ಹೆಚ್ಚು ಪಡಿತರ ವಿತರಕರು ಪಡಿತರ ವಿತರಣೆಯನ್ನು ಎತ್ತುವಳಿ ಮಾಡದೆ ವಿತರಣೆಯನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ
ಈ ಪ್ರತಿಭಟನೆಗೆ ಪೂರ್ವಭಾವಿ ಸಭೆಯಾಗಿ ಬೆಂಗಳೂರು ನಗರದ ಸಾಮ್ರಾಟ್ ಹೋಟೆಲ್ ನಲ್ಲಿ 31ನೇ ತಾರೀಕು ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಕೇಂದ್ರದ ಪದಾಧಿಕಾರಿಗಳು ಸಭೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ ಇದರಲ್ಲಿ ಸರ್ಕಾರ ಪಡಿತರ ವಿತರಕರನ್ನು ಕಡೆಗಣಿಸಲಾಗುತ್ತಿದ್ದು ಸಮಯಕ್ಕೆ ಸರಿಯಾಗಿ ಕಮಿಷನ್ ನೀಡದೆ ಪಡಿತರ ವಿತರಣೆಗೆ ನಿರಂತರವಾಗಿ ಸರ್ವ ರ್ ಸಮಸ್ಯೆ ಅಲ್ಲದೆ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಿಸಿದಂತೆ ಅದರಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡದೆ ಐದು ಕೆಜಿ ಅಕ್ಕಿ ಮಾತ್ರ ನೀಡುತ್ತಿದ್ದು ಇನ್ನುಳಿದ 5 ಕೆಜಿ ಅಕ್ಕಿ ಬದಲಾಗಿ ಡಿಬಿಟಿ ಮುಖಾಂತರ ಪಡಿತರ ಫಲಾನುಭವಿಗಳಿಗೆ ಹಣ ನೀಡುತ್ತಿರುವುದರಿಂದ ಪಡಿತರ ವಿತರಕರಿಗೆ 5 ಕೆಜಿ ಅಕ್ಕಿ ಕಮಿಷನ್ ಕೂಡ ನಷ್ಟ ಉಂಟಾಗಿರುತ್ತದೆ ಈ ಎಲ್ಲಾ ಬೇಡಿಕೆಗಳಿಗೆ ರಾಜ್ಯ ಪಡಿತರ ವಿತರಕರ ಸಂಘ ನಿರಂತರವಾಗಿ ಮುಖ್ಯಮಂತ್ರಿಗಳು ಮತ್ತು ಆಹಾರ ಸಚಿವರು ಆಹಾರ ಇಲಾಖೆ ಉನ್ನತ ಅಧಿಕಾರಿಗಳಿಗೂ ಸಹ ಕಳೆದ ಹಲವಾರು ಬಾರಿ ಮನವಿ ನೀಡಿದರು ಸಹ ಸ್ಪಂದಿಸದಿರುವುದೇ ಪಡಿತರ ವಿತರಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ

