
ಉದಯವಾಹಿನಿ ಸಿಂಧನೂರು : ತಾಲೂಕಿನ ಕೆಳಭಾಗದ ರೈತರಿಗೆ ಬರ ಪರಿಹಾರ ಇಲ್ಲ ಬದಲಾಗಿ ಕೇವಲ ಬರೆ ಮಾತ್ರ.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುಂಗಭದ್ರಾ 54ನೇ ಕಾಲುವೆಯ ಕೆಳಭಾಗದ ರೈತರು ವಾಸಿಸುವ ಗೋನವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಧೂಮತಿ ಮತ್ತು ಗೊನವಾರ ಮತ್ತು ಹುಲಗುಂಚಿ ಗ್ರಾಮದ ರೈತರು ಸುಮಾರು 5000 ಎಕರೆ ಪ್ರದೇಶದಲ್ಲಿ ಹೈಬ್ರಿಡ್ ಜೋಳ ಮತ್ತು ಹೈಬ್ರಿಡ್ ಹತ್ತಿ ಬೆಳೆದಿದ್ದು ಈ ವರ್ಷ ಮಳೆ ಕೈ ಕೊಟ್ಟಿದ್ದರಿಂದ ಸಂಪೂರ್ಣವಾಗಿ ಈ ಪ್ರದೇಶದಲ್ಲಿ ಬರಗಾಲ ಆವರಿಸಿದೆ ಜೋಳ ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ತುಂಗಭದ್ರಾ ಕಾಲುವೆ ಹೆಸರಿಗೆ ಮಾತ್ರ ಇದ್ದು ಈ ಭಾಗದ ರೈತರಿಗೆ ತುಂಗಭದ್ರೆ ಕಾಲುವೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ.ಎಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ ಜಿ.ಸಿದ್ಧನಗೌಡ
ಈಗಾಗಲೇ ಎಕರೆಗೆ ಸುಮಾರು ಇಪ್ಪತ್ತರಿಂದ ಮೂವತ್ತು ಸಾವಿರ ರೂ ಖರ್ಚು ಮಾಡಿ ತಲೆ ಮೇಲೆ ಕೈವತ್ತು ಮೋಡದ ಕಡೆ ಮುಖ ಮಾಡಿ ಕುಳಿತಿದ್ದಾರೆ. ಅಲ್ಲದೆ ನೀರಾವರಿ ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಇಡೀ ಶಾಪವನ್ನು ಹಾಕುತ್ತಿದ್ದಾರೆ. ಹಾಗೂ ಸಾಲದ ಬಾದೆತಾಳಲಾರದೆ ದಿನನಿತ್ಯದ ಜೀವನ ನಡೆಸುವುದೇ ಅಸಾಧ್ಯವಾಗಿರುವುದರಿಂದ ಹಳ್ಳಿಗಳನ್ನು ಬಿಟ್ಟು ಪಟ್ಟಣಗಳಿಗೆ ಮುಖಮಾಡಿ ಬೆಂಗಳೂರು ಹೈದರಾಬಾದ್ ಗಳಿಗೆ ಗೊಳ್ಳೆ ಹೊರಟಿದ್ದಾರೆ. ರೈತಾಪಿ ವರ್ಗ ಜನರು. ಹಳ್ಳಿಗಳು ಜನಗಳಲ್ಲದೆ ಬಿಕೋ ಎನ್ನುತ್ತೇವೆ ಮಳೆಯ ಕೊರತೆ ಮತ್ತು ಕಾಲುವೆ ನೀರಿಲ್ಲ ಅಭಾವದಿಂದ ತತ್ತರಿಸಿದ ಜನಗಳು ದಿಕ್ಕು ತೋಚದಂತಾಗಿ ಮುಂದಿನ ದಿನಮಾನಗಳಲ್ಲಿ ರೈತರು ಆತ್ಮಹತ್ಯೆಗೆ ಮುಂದಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಆದಕಾರಣ ಸಂಬಂಧಿಸಿದ ಕಂದಾಯ ಅಧಿಕಾರಿಗಳು ನೀರಾವರಿ ಅಧಿಕಾರಿಗಳು ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಗ್ರಾಮಗಳ ರೈತರ ಹೊಲಗಳಿಗೆ ತಕ್ಷಣ ಬಿಟ್ಟು ವೀಕ್ಷಿಸಿ ಸರಕಾರಕ್ಕೆ ವರದಿ ಮುಟ್ಟಿಸಿ ಅತಿ ಶೀಘ್ರದಲ್ಲಿ ಗೋನವಾರ ಗ್ರಾಮ ಪಂಚಾಯಿತಿ ರಾಗಲಪರ್ವಿ ಗ್ರಾಮ ಪಂಚಾಯಿತಿ ಹೆಡಿಗಿನಾಳ ಗ್ರಾಮ ಪಂಚಾಯಿತಿ ಮತ್ತು ಒಳಬಳ್ಳಾರಿ ಗ್ರಾಮ ಪಂಚಾಯಿತಿ ಗಳನ್ನು ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಕಳಿಸಿ ತಕ್ಷಣವೇ ಬರ ಪರಿಹಾರ ಕಾರ್ಯಕ್ಕೆ ಮುಂದಾಗಬೇಕೆಂದು ತಮ್ಮಲ್ಲಿ ನೊಂದ ರೈತರು ವಿನಂತಿಸಿಕೊಳ್ಳುತ್ತೇವೆ ಡಾ. ರಾಮಣ್ಣ ಗೋನವಾರ ಈ ಸಂದರ್ಭದಲ್ಲಿ ನೊಂದ ರೈತರು .ವೀರೇಶ ಗಂಗಾವತಿ.ಬುಡ್ಡನಗೌಡ ಮಾಲೀಪಾಟಲ್ ಗುರುರಾಜರಾವ್ ಕುಲಕರ್ಣಿ.ಬಿಎಚ್.ನಾಯಕ. ರಾಮನಗೌಡ ಭೂಮರಡ್ಡಿ. ವೀರೇಶ್ ನಾಯಕ ಮಳ್ಳಿ. ಬುಡ್ಡಯ್ಯ ನಾಯಕ್. ಸೇರಿದಂತೆ ಇತರರು ಇದ್ದರು.
