ಉದಯವಾಹಿನಿ, ಹೈದರಾಬಾದ್: ಮೃಣಾಲ್ ಠಾಕೂರ್ ಅವರು ಕಿರುತೆರೆಯಿಂದ ಹಿರಿತೆರೆಗೆ ಪಯಣ ಬೆಳೆಸಿದ ನಟಿಯರಲ್ಲಿ ಒಬ್ಬರು ಮತ್ತು ತಮ್ಮ ನಟನೆಯಿಂದ ಚಿತ್ರರಂಗದಲ್ಲಿ ಭದ್ರ ಸ್ಥಾನವನ್ನುಗಳಿಸಿದ್ದಾರೆ. ನಟಿ ತನ್ನ ಚಲನಚಿತ್ರಗಳ ಹೊರತಾಗಿ, ತನ್ನ ಫ್ಯಾಷನ್ ಸೆನ್ಸ್‌ಗಾಗಿಯೂ ಸುದ್ದಿಯಲ್ಲಿರುತ್ತಾಳೆ.ಅವರು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಯಾಶೀಲವಾಗಿರುವ ನಟಿ ತಮ್ಮ ಇತ್ತೀಚಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ನಟಿ ಕಪ್ಪು ರವಿಕೆ, ರಫಲ್ ಸ್ಕರ್ಟ್ ಮತ್ತು ಹೂವಿನ ಕೇಪ್ ಧರಿಸಿದ್ದಾರೆ. ಮೃಣಾಲ್ ಫೋಟೋಗೆ ಅಭಿಮಾನಿಗಳು ಮನಸೋತಿದ್ದು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.
ಸೀತಾ ರಾಮನ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಮೃಣಾಲ್ ಠಾಕೂರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿಯ ಸೀತಾ ಮಹಾಲಕ್ಷ್ಮಿಯ ಮಾಡ್ ಡ್ರೆಸ್ ನೋಡಿದ ಅಭಿಮಾನಿಗಳು ಸೀತಾ ಮಹಾಲಕ್ಷ್ಮಿ ಸಿಕ್ಕಾಪಟ್ಟೆ ಮಾಡರ್ನ್ ಅಂತ ಕಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!