ಉದಯವಾಹಿನಿ, ಲಂಡನ್: ಐಸ್ ಹಾಕಿ ಟೂರ್ನಿಯಲ್ಲಿ ಆಟವಾಡುತ್ತಿದ್ದ ವೇಳೆಯೇ ಕುತ್ತಿಗೆಗೆ ಗಂಭೀರ ಗಾಯಗೊಂಡು ನಾಟಿಂಗ್ಹ್ಯಾಮ್ ಪ್ಯಾಂಥರ್ಸ್ ಫಾರ್ವರ್ಡ್‌ನ ಆಟಗಾರ, ಅಮೆರಿಕಾದ ಆಡಮ್ ಜಾನ್ಸನ್ (೨೯) ಅವರು ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ. ಶೆಫೀಲ್ಡ್ ಸ್ಟೀಲರ್ಸ್ ವಿರುದ್ಧದ ಚಾಲೆಂಜ್ ಕಪ್ ಪಂದ್ಯದ ೩೫ನೇ ನಿಮಿಷದಲ್ಲಿ ಜಾನ್ಸನ್ ಅವರ ಕುತ್ತಿಗೆಗೆ ಸ್ಕೇಟ್‌ನಿಂದ ಗಂಭೀರ ರೀತಿಯಲ್ಲಿ ಗಾಯಗೊಂಡಿತ್ತು. ಆಟದ ವೇಳೆ ಶೆಫೀಲ್ಡ್ ತಂಡದ ಆಟಗಾರನ ಜೊತೆ ಡಿಕ್ಕಿ ಹೊಡೆದ ಬಳಿಕ ಜಾನ್ಸನ್ ಅವರ ಕುತ್ತಿಗೆಗೆ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಕೂಡಲೇ ಜಾನ್ಸನ್ ಅವರಿಗೆ ಐಸ್ ಮೇಲೆಯೇ ವೈದ್ಯಾಧಿಕಾರಿಗಳ ತಂಡವು ತುರ್ತು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ನಾಟಿಂಗ್ಹ್ಯಾಮ್ ಪ್ಯಾಂಥರ್ಸ್ ತಂಡ ತನ್ನ ಪ್ರಕಟನೆಯಲ್ಲಿ ಜಾನ್ಸನ್ ಅವರ ಸಾವಿನ ಸುದ್ದಿಯನ್ನು ಪ್ರಕಟಿಸಿದೆ. ನಮ್ಮ ತಂಡ ಅವರನ್ನು ಕಳೆದುಕೊಳ್ಳುತ್ತಿದೆ. ನಾವು ಅವರನ್ನು ಎಂದಿಗೂ ಮರೆಯುವುದಿಲ್ಲ.

Leave a Reply

Your email address will not be published. Required fields are marked *

error: Content is protected !!