ಉದಯವಾಹಿನಿ ಅರಸೀಕೆರೆ: ರಾಜ್ಯದಲ್ಲಿ ಸುಪ್ರಸಿದ್ಧ ವಾಗಿರುವ ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ಕಳೆದ 82 ವರ್ಷಗಳಿಂದಲೂ ವಿಜೃಂಭಣೆಯಿಂದ ನಡೆಯುತ್ತಾ ಬಂದಿತ್ತು ರಾಜ್ಯದಲ್ಲಿಯೇ ಸುಪ್ರಸಿದ್ಧವಾದ ಗಣೇಶ ಮೂರ್ತಿಯನ್ನು ಹೊಂದಿದ್ದು ಸುಮಾರು ಎರಡು ತಿಂಗಳಿಗೂ ಹೆಚ್ಚು ಅಂದರೆ 70 ದಿನಗಳವರೆಗೆ ಶ್ರೀ ಪ್ರಸನ್ನ ಗಣಪತಿ ಅವರನ್ನು ಪ್ರತಿಷ್ಠಾಪಿಸಲಾಗಿರುತ್ತದೆ ನಂತರ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದು ಈ ಗಣೇಶೋತ್ಸವದ ಪ್ರಯುಕ್ತ ಭಾನುವಾರ ಅಂದರೆ ನಿನ್ನೆ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ಕಾಮಿಡಿ ಕಿಲಾಡಿಗಳಾದ ಕಿರುತೆರೆ ನಟರು ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು ಈ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಅರಸಿಕೆರೆ ಕ್ಷೇತ್ರದ ಶಾಸಕರದ ಕೆ ಎಂ ಶಿವಲಿಂಗೇಗೌಡ ಸೇರಿದಂತೆ ಹಲವಾರು ಗಣ್ಯರು ಸಹಸ್ರಾರ್ ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಗುರುವಾರ ಪಡಿತರ ವಿತರಕರ ಸಂಘದಿಂದ ಪೂಜಾ ಸಮಾರಂಭ ಅರಸೀಕೆರೆ ತಾಲೂಕು ಪಡಿತರ ವಿತರಕರ ಸಂಘದ ವತಿಯಿಂದ ಗುರುವಾರ ಮಧ್ಯಾಹ್ನ ಶ್ರೀ ಪ್ರಸನ್ನ ಗಣಪತಿಯವರಿಗೆ ಪೂಜಾ ಸೇವಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಸಿಕೆರೆ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ ತಿಳಿಸಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕೆ ತಾಲೂಕಿನ ಎಲ್ಲಾ ಪಡಿತರ ವಿತರಕರು ಶ್ರೀ ಪ್ರಸನ್ನ ಗಣಪತಿಯವರ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!