
ಉದಯವಾಹಿನಿ, ಶಿಡ್ಲಘಟ್ಟ: ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸವಾರರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಎಲ್ಲಾ ವಾಹನ ಸವಾರರು ಬೈಕ್ ಇನ್ಸೂರೆನ್ಸ್ ಮಾಡಿಸಿಕೊಳ್ಳಲೇಬೇಕು. ನನಗೆ ಶಾಸಕರು ಗೊತ್ತು ,ಎಂಪಿ ಗೊತ್ತು ಎಂದು ಬೇಜವಾಬ್ದಾರಿ ಮಾಡಿದರೆ ಅವರನ್ನ ಒಳಗೆ ಹಾಕಲಾಗುತ್ತದೆ ಎಂದು ನಗರ ಠಾಣೆಯ ಪಿಎಸ್ ಐ ಎಂ ವೇಣುಗೋಪಾಲ್ ಅವರು ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು.ನಗರದ ಠಾಣೆಯ ಮುಂಭಾಗ ಸೋಮವಾರ ಬೈಕ್ ಸವಾರರನ್ನು ತಡೆಗಟ್ಟಿ ಇನ್ಸೂರೆನ್ಸ್ ಪರಿಶೀಲನೆ ಮಾಡಿ, ಇಲ್ಲದೇ ಇರುವವರಿಗೆ ಕಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಬೇಕು ಎಂದು ಅರಿವು ಮೂಡಿಸುವ ಸಲವಾಗಿ ಮಾತನಾಡಿದರು. ಇನ್ಸೂರೆನ್ಸ್ ಮಾಡಿಸಿದ್ದರೆ ನಿಮಗೆ ಉಪಯೋಗವಾಗುತ್ತದೆ.ರಸ್ತೆ ಅಪಘಾತ ಅಥವಾ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ನಿಮ್ಮ ಪ್ರಾಣ ಕಳೆದುಕೊಂಡಾಗ ನಿಮ್ಮ ಕುಟುಂಬಕ್ಕೆ ನೆರವಾಗುತ್ತದೆ. ದಯವಿಟ್ಟು ಎಲ್ಲಾ ಬೈಕ್ ಸವಾರರು ತಪ್ಪದೇ ಇನ್ಸೂರೆನ್ಸ್ ಮಾಡಿಸಿ ಎಂದರು. 18 ವರ್ಷದ ಒಳಗಿನ ಮಕ್ಕಳು ಡ್ರೈವಿಂಗ್ ಮಾಡಬಾರದು ಒಂದು ವೇಳೆ ಮಾಡುವುದು ನಮ್ಮ ಗಮನಕ್ಕೆ ಬಂದರೆ ಅವರನ್ನ ಕಾನೂನು ಕ್ರಮವಹಿಸಲಾಗುವುದು ಎಂದರು.ವಾಹನ ಸವಾರರು ಇನ್ಸೂರೆನ್ಸ್ ಇಲ್ಲದೆ ಇದ್ದಂತವರು ಕೆಲ ಕಾಲ ಅವರನ್ನು ಎಷ್ಟು ಕೇಳಿಕೊಂಡರೂ ಬೈಕ್ ಬಿಡಲಿಲ್ಲ ನಂತರ ಕೆಲವರು ಬೇರೆಡೆಗೆ ಹೋಗಿ ಇನ್ಸೂರೆನ್ಸ್ ಮಾಡಿಸಿಕೊಂಡು ಬಂದು ಇನ್ಸೂರೆನ್ಸ್ ಪ್ರತಿ ತೋರಿಸಿ ಬೈಕ್ ಪಡೆದುಕೊಂಡರೆ ಇನ್ನು ಕೆಲವರು ತಮ್ಮ ಮೊಬೈಲ್ ನ ಪೋನ್ ಪೇ ಯಲ್ಲೇ ಇನ್ಸೂರೆನ್ಸ್ ಹಣ ಪಾವತಿಸಿ ಬಿಲ್ ಪ್ರತಿಯನ್ನು ಮೊಬೈಲ್ ನಲ್ಲೇ ತೋರಿಸಿ ಬೈಕ್ ಪಡೆದುಕೊಂಡರು.
ವಾಹನ ಸವಾರರು ಪೋಲಿಸರು ಹೇಳುವ ರಸ್ತೆ ಮತ್ತು ವಾಹನದ ನಿಯಮಗಳು ಹಾಗೂ ವಾಹನದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ವಾಹನ ಚಲಾಯಿಸುವುದು ತುಂಬಾ ಉತ್ತಮ. ನನ್ನ ಬಳಿ ಬೈಕ್ ವಿಮೆ ಇರಲಿಲ್ಲ ವಾಹನ ಹಿಡಿದಾಗ ತಕ್ಷಣ ನಾನು ವಿಮೆಯನ್ನು ಪೋನ್ ಪೇಯಲ್ಲಿ ಹಣ ಪಾವತಿ ಮಾಡಿ ಪ್ರತಿಯನ್ನು ತೋರಿಸಿ ನನ್ನ ಬೈಕ್ ಬಿಡಿಸಿಕೊಂಡು ಹೋಗುತ್ತಿದ್ದೆನೆ . ದಯವಿಟ್ಟು ಎಲ್ಲರೂ ತಪ್ಪದೇ ವಾಹನ ವಿಮೆ ಮಾಡಿಸಿಕೊಳ್ಳಿ. -ಬಾಬಾಜಾನ್. ವಾಹನ ಸವಾರ
