ಉದಯವಾಹಿನಿ, ಬೆಂಗಳೂರು: ಹಲವು ವರ್ಷಗಳಿಂದ ವರ್ಗಾವಣೆ, ಮಾನದಂಡಗಳನ್ನು ಉಲ್ಲಂಘಿಸಿ ಅನೇಕ ಹುದ್ದೆಯಲ್ಲಿ ಬೀಡುಬಿಟ್ಟಿರುವ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಸರ್ಕಾರಿ ನರ್ಸಿಂಗ್ ಶಾಲೆ ಪ್ರಾಂಶುಪಾಲೆ ವಿದ್ಯಾರಾಜು ಸಾಲಿಯಾನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.
ನಗರದಲ್ಲಿಂದು ಜನತಾ ಪಕ್ಷದ ರಾಜ್ಯಾ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ದೂರು ಸಲ್ಲಿಕೆ ಮಾಡಿದ್ದು, ರಾಜ್ಯ ಸರ್ಕಾರದ ನಿಯಾಮವಳಿ ಉಲಂಘಿಸಿ ಏಕಕಾಲದಲ್ಲಿ ಹೆಚ್ಚಿನ ಹುದ್ದೆಗಳನ್ನು ಅಲಂಕರಿಸಿದ ವಿದ್ಯಾರಾಜು ಸಾಲಿಯಾನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿದ್ಯಾರಾಜು ಸಾಲಿಯಾನ ೨೦೦೭ ರಲ್ಲಿ ಶುಶ್ರೊಶಕರಾಗಿ ನೇಮಕಗೊಂಡು, ೨೦೧೧ರಲ್ಲಿ ಪ್ರಾಂಶುಪಾಲರಾಗಿ ನಂತರ ಏಕಕಾಲದಲ್ಲಿ ಇಲ್ಲಿಯವರೆಗೆ, ಹೆಚ್‌ಡಿಓ ಮಾತ್ರವಲ್ಲದೆ, ಪ್ರಸುತ್ತ ಸ್ಕೂಲ್ ಆಫ್ ನಸಿಂಗ್‌ಗೆ ಪ್ರಾಂಶುಪಾಲರಾಗಿ, ಕಾಲೇಜು ಆಫ್ ನಸಿಂಗ್, ಪ್ಯಾರಾಮೆಡಿಕಲ್ ನ ಪ್ರಾಂಶುಪಾಲರಾಗಿ, ಬಿಎಲ್‌ಸಿಎಚ್ ಆಸ್ಪತ್ರೆ ಉಸ್ತುವಾರಿ, ಪ್ಯಾರಾಮೆಡಿಕಲ್ ಕಮಿಟಿ ಸದಸ್ಯರಾಗಿ ಅಚ್ಚರಿಯ ರೀತಿಯಲ್ಲಿ ಇ? ಹುದ್ದೆಗಳಲ್ಲಿ ವಿದ್ಯಾರಾಜು ಸಾಲಿಯಾನ ಓರ್ವರೇ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
