ಉದಯವಾಹಿನಿ, ಕೋಲಾರ: ಸಮಾಜದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು, ವ್ಯಾಪಾರೋದ್ಯಮ ಮಾರ್ಕೆಟಿಂಗ್,ಪೂರೈಕೆದಾರರ ಗುರುತಿಸುವಿಕೆ, ನೇಮಕಾತಿ ಹಾಗೂ ಸಂಪನ್ಮೋಲಗಳ ಪರಸ್ಪರ ಹಂಚಿಕೆಗಳನ್ನು ಉತ್ತೇಜಿಸಲು ಫಸ್ಟ್ ಸರ್ಕಲ್ ಸಂಸ್ಥೆಯನ್ನು ಸ್ಥಾಪಿಸಿ ಕೊಂಡು ರಾಜ್ಯದಲ್ಲಿ ಈಗಾಗಲೇ ಮಂಡ್ಯ ಹಾಗೂ ಹಾಸನಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಯಶ್ವಸ್ಸಿಗೊಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನಂದೀಶ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಾ ಕೋಲಾರದಲ್ಲಿ ನವೆಂಬರ್ ೩ ರಂದು ಉದ್ಯೋಗ ಮೇಳವನ್ನು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಅವಕಾಶವನ್ನು ಯುವ ಜನತೆ ಸದ್ಬಳಿಸಿ ಕೊಂಡು ಯಶಸ್ವಿಗೊಳಿಸಿ ಕರ್ನಾಟಕವನ್ನು ನಿರುದ್ಯೋಗ ಮುಕ್ತ ರಾಜ್ಯವನ್ನಾಗಿಸ ಬೇಕೆಂಬ ಗುರಿಯನ್ನು ನಮ್ಮ ಸಂಸ್ಥೆ ಹೊಂದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಮನವಿ ಮಾಡಿದರು,
ಮುಂದೆ ಡಿಸೆಂಬರ್ ೧,೨ ಹಾಗೂ ೩ ರಂದು ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದ ಜಾಬ್ ಎಕ್ಸ್‌ಪೋವನ್ನು ಟಿನಿಸ್ ಪೆವಿಲಿಯನ್‌ನಲ್ಲಿ ಆಯೋಜಿಸಲಾಗುವುದು, ಸುಮಾರು ೧೨೦ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ.
