ಉದಯವಾಹಿನಿ,ದೇವದುರ್ಗ:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದ ಪ್ರಸಾದ ಎಂಬ ದಲಿತ ಮುಖಂಡರನ್ನು ಏಳಿಗೆಯನ್ನು ಸಹಿಸದೇ,ಹಳೇ ದ್ವೇಶದಿಂದ ಕೊಲೆ ಮಾಡಿರುವ ಘಟನೆ ಖಂಡನೀಯವಾಗಿದ್ದು,ಕೂಡಲೇ ಆರೋಪಿಗಳನ್ನು ಬಂಧಿಸಿಬೇಕೆಂದು ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪನೆ) ಒತ್ತಾಯಿಸಿದೆ.ಪಟ್ಟಣದಲ್ಲಿ ಸಂಘಟನೆ ಪದಾಧಿಕಾರಿಗಳ ನಿಯೋಗ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿರಿಗೆ ಸೋಮವಾರ ಮನವಿ ಸಲ್ಲಿಸಿತು.ತಳಸಮುದಾಯಗಳೊಂದಿಗೆ ಉತ್ತಮ ಬಾಂಧ್ಯವದೊಂದಿಗೆ ಬಾಳಿ,ದಲಿತರ ಸಮಸ್ಯೆಗಳಿಗೆ ಸ್ಪಂದಿಸುವ ಉತ್ತಮ ಗುಣವುಳ್ಳ ನಾಯಕರಾಗಿ ಹೊರಹೊಮ್ಮಿದ್ದರು.ಹಳೇ ದ್ವೇಶದ ಹಿನ್ನಲೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.ಈಗಾಗಲೇ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರೇ ಹೇಳಿದ್ದಾರೆ.ಆರೋಪಿಗಳಾದ ರಬ್ಬಣಕಲ್ ಗ್ರಾಮದ ರಾಮು,ಕೇಶವ ಸೇರಿದಂತೆ ಇತರರನ್ನೂಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು.ಭರವಸೆಯ ನಾಯಕನನ್ನುಕಳೆದುಕೊಂಡಿರುವ ಅವರ ಕುಟುಂಬಕ್ಕೆ,ಅವರ ಅಭಿಮಾನಿಗಳು,ಹಿತೈಷಿಗಳಿಗೆ ಕಾನೂನು ರಕ್ಷಣೆ ನೀಡಬೇಕೆಂದು,ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಯೋಜನೆಗಳನ್ನು ಒದಗಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಶಿವಪ್ಪ ಪಲಕನಮರಡಿ,ಬೂದೆಪ್ಪ ಗಬ್ಬೂರ,ಬಸವರಾಹ ಹುಲಿಗುಡ್ಡ,ಭೀಮಣ್ಣ ವೀರಗೋಟ,ಹೈಧರಲಿ,ಯಲ್ಲಪ್ಪ ಮಲದಕಲ್,ರಾಮಪ್ಪ,ಹನುಮಂತ,ಖಾಜಾಹುಸೇನ್,ಮೋಹನಕುಮಾರ ಸಿಂಗ್ರಿ,ಸಿದ್ದಪ್ಪ,ರಮೇಶ ಬಾವಿಮನಿ,ನಾಗರಾಜ ದೇವರಮನಿ,ಶಾಂತಪ್ಪ,ಧರ್ಮರಾಜ,ರವಿ ಜಾಡಲದಿನ್ನಿ ಹಾಗೂ ಇತರರು ಇದ್ದರು..

Leave a Reply

Your email address will not be published. Required fields are marked *

error: Content is protected !!