
ಉದಯವಾಹಿನಿ, ಬೆಂಗಳೂರು: ಕನ್ನಡದ ಬೋರ್ಗರೆತ, ವೀರಭದ್ರಕುಣಿತ ಜಾನಪದ ಕಲಾತಂಡಗಳ ನೃತ್ಯದೊಂದಿಗೆ ನಾಡಹಬ್ಬದ ಸಂಭ್ರಮ ಇದೆಲ್ಲವು ಕಂಡು ಬಂದದ್ದು ಕನ್ನಡ ಭಾಷೆಯೆ ಮರೆತಿಂತಿರುವ ನಗರದ ಹೃದಯಭಾಗದ ಎಂ.ಜಿ.ರಸ್ತೆಯಲ್ಲಿ ಕಂಡುಬಂದ ದೃಶ್ಯಗಳಿವು. ಜಯಕರ್ನಾಟ ಜನಪರ ವೇದಿಕೆ, ಐಕೇರ್ ಬ್ರಿಗೇಡ್ ಹಾಗೂ ಬಾರ್ಟನ್ ಸೆಂಟರ್ ಸಂಘದ ವತಿಯಿಂದ ನಗರದ ಒಂದು ಎಂ.ಜಿ.ರಸ್ತೆಯ ಬಾರ್ಟನ್ ಸೆಂಟರ್ ನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಹಬ್ಬದ ವೈಭವ ರಾರಾಜಿಸಿತು. ಜಯಕರ್ನಾಟಕ ಜನಪರವೇದಿಕೆ, ಐಕೇರ್ ಫೌಂಡೇಶನ್ ಹಾಗೂ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಕನ್ನಡಾಂಬೆಗೆ ಅದ್ದೂರಿ ಮಂಟಪದಲ್ಲಿ ಪೂಜೆ ಮಾಡುವ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡೊಳ್ಳು, ಪೂಜಾಕುಣಿತ, ವೀರಭದ್ರ ಕುಣಿತದೊಂದಿಗೆ ಕನ್ನಡ ಹಬ್ಬ ಕಳೆಕಟ್ಟಿತು. ಇನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜಯಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಕನ್ನಡಾಂಬೆಗೆ ಜೈಕಾರ ಕೂಗುತ್ತಾ, ಎಂಜಿ ರಸ್ತೆಯಲ್ಲಿ ಕನ್ನಡತಾಯಿಯ ಮೆರವಣಿಗೆ ಮಾಡುತ್ತ ವೇದಿಕೆ ಪದಾಧಿಕಾರಿಗಳು ಸಂಭ್ರಮಿಸಿದರು.
