
ಉದಯವಾಹಿನಿ ಅಫಜಲಪುರ: ಈ ವರ್ಷದ ಕಬ್ಬು ದರ ನಿಗದಿ ಪಡಿಸಿ ಕಾರ್ಖಾನೆ ಪ್ರಾರಂಭಿಸಿ. ಮತ್ತು ಕೆ.ಪಿ.ಆರ್(KPR) ಸಕ್ಕರೆ ಕಾರ್ಖಾನೆಯಿಂದ 50 ರೂಪಾಯಿ ಬಾಕಿ ಹಣ ಕೋಡಿಸಬೇಕು ಎಂದು ಕಬ್ಬು ಬೇಳೆಗಾರರ ಸಂಘದ ವತಿಯಿಂದ ತಾಸಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು,ನಂತರ ರಮೇಶ ಹೂಗಾರ ಮಾತನಾಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕಬ್ಬಿನ ದರ ನಿಗದಿಪಡಿಸಿ ಕಾರ್ಖಾನೆ ಪ್ರಾರಂಭಿಸಿ ಎಂದು ಕಾರ್ಖಾನೆ ಮಾಲೀಕರಿಗೆ ತಾಕಿತು ಮಾಡಿದರು ಕೂಡ ಜಿಲ್ಲಾಧಿಕಾರಿಗಳ ಮಾತಿಗೆ ಮನ್ನಣೆ ಕೊಡದೆ ಕಬಿನ ದರ ನಿಗದಿಪಡಿಸದೆ ಕಬ್ಬು ಕಟ್ ಮಾಡಿ ಕಾರ್ಖಾನೆ ಪ್ರಾರಂಭಿಸುತ್ತಿದ್ದಾರೆ, ಆ ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳು ನೀವು ಕೂಡ ಭಾಗವಹಿಸಿದ್ದೀರಿ ಕಾರ್ಖಾನೆ ಅಧಿಕಾರಿಗಳನ್ನು ಮಾತನಾಡಿ ಕೂಡಲೇ ಕಬ್ಬಿಗೆ ದರ ನಿಗದಿಪಡಿಸಬೇಕು ಮತ್ತು ಈ ವರ್ಷ ಬರಗಾಲ ಪ್ರಯುಕ್ತ ಕೆಲವು ಜಿಲ್ಲೆಗಳಲ್ಲಿ F.R.P(ಎಫ್.ಆರ್.ಪಿ) ಪ್ರಕಾರ ದರ ಕಡಿಮೆ ಇದ್ದರೂ ಅದನ್ನು ಹೊರತುಪಡಿಸಿ 2900 ರಿಂದ 3000 ಕಬ್ಬಿನ ದರ ನಿಗದಿಪಡಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕೂಡ ಕಬ್ಬಿಗೆ 3000 ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದೆವೆ. ಮತ್ತು ರೈತ ಬಾಂಧವರು ಯಾವ ಕಾರ್ಖಾನೆ ಎಷ್ಟು ಕೊಡುತ್ತಾರೆ ಎನ್ನುವುದು ನಿಖರ ಮಾಹಿತಿ ತಿಳಿದುಕೊಂಡು ಕಾರ್ಖಾನೆಗೆ ಕಬ್ಬು ಪೂರೈಸಬೇಕು,ಏಕೆಂದರೆ ಹೋದ ವರ್ಷ ಇಳುವರಿಯ ನೆಪವಡ್ಡಿ ಕೆ.ಪಿ.ಆರ್(KPR) ಸಕ್ಕರೆ ಕಾರ್ಖಾನೆ ಐವತ್ತು ರೂಪಾಯಿ ಕಡಿಮೆ ಕೊಟ್ಟಿದೆ ಈ ವರ್ಷ ರೈತರು ಹಾಗೆ ಮೋಸ ಹೋಗಬಾರದು ಈ ವರ್ಷ ಬರಗಾಲವಿದ್ದು ಕಬ್ಬಿನ ಬೆಳೆ ಕೂಡ ಕಡಿಮೆಯಾಗಿದೆ ಇಳುವರಿ ಕೂಡ ಕಡಿಮೆ ಬರುತ್ತದೆ ಕಾರ್ಖಾನೆಗಳಿಗೆ ಹೆಚ್ಚು ಕಬ್ಬು ಬೇಕು ಯಾರು ಹೆಚ್ಚಿಗೆ ಬೆಲೆ ನಿಗದಿಪಡಿಸುತ್ತಾರೋ ಹಂತ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಮತ್ತು ಹೋದ ವರ್ಷ ಬಿಜೆಪಿ ಸರ್ಕಾರ ನಿಗದಿಪಡಿಸಿದ 150 ರೂಪಾಯಿ ಬಾಕಿ ಹಣ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕೊಡಬೇಕು ಕೊಡಿಸಲು ಸರ್ಕಾರ ರೈತರ ಪರವಾಗಿ ಕ್ರಮ ಕೈಗೊಳ್ಳಬೇಕು.ಮತ್ತು ಬರಗಾಲ ದಿಂದ ಕಂಗೆಟ್ಟ ರೈತನಿಗೆ ಕೂಡಲೇ ಬರ ಪರಿಹಾರ ನೆರವು ನೀಡಬೇಕೆಂದು ಒತ್ತಾಯಿದರು. ಈ ಸಂಧರ್ಭದಲ್ಲಿ ರೈತ ಮುಖಂಡರಾದ ಲಕ್ಷ್ಮಿ ಪುತ್ರ ಮನಿಮಿ ನಗರ ಘಟಕ ಅಧ್ಯಕ್ಷರಾದ ಬಸವರಾಜ ಹೇರೂರು,ಶರಣಗೌಡ ಮಾಲಿಪಾಟೀಲ್, ಬಸುರಾಜ್ ಭಾಗಣ್ಣ ಕುಂಬಾರ ಹಳ್ಳಿಮನೆ, ಮಲ್ಲನಗೌಡ ಪಾಟೀಲ್, ಅಣ್ಣರಾಯಗೌಡ ಪಾಟೀಲ್, ಸಿದ್ದು ಪಾಟೀಲ್, ಮಾಳಪ್ಪ ಪೂಜಾರಿ ಹಿಂಚಗೇರಿ ಸೇರಿದಂತೆ ರೈತರು ಉಪಸ್ಥಿತರಿದ್ದರು..
