ಉದಯವಾಹಿನಿ ಮಸ್ಕಿ: ಕನ್ನಡ ಭಾಷೆಯ ಬಗ್ಗೆ ಅರಿತುಕೊಳ್ಳುವ ಮೊದಲು ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಹೇಳಿದರು.
ಪಟ್ಟಣದ ಕೇಂದ್ರ ಶಾಲೆಯ ಆವರಣದಲ್ಲಿ ತಾಲೂಕ‌ ಆಡಳಿತ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯುವಕರ ಮನಸ್ಸು ಏಕಾಗ್ರತೆಯ ಕಡೆಗೆ ವಾಲಬೇಕು. ಇಂದಿನ ಯುವಕರು, ವಿದ್ಯಾರ್ಥಿಗಳು ಟಿವಿ, ಸಿನಿಮಾ, ಮೊಬೈಲ್‌ ಮುಂತಾದ ಆಧುನಿಕತೆಯ ಕಡೆಗೆ ತನ್ನ ಲಕ್ಷ  ಇಡುತ್ತಾರೆ. ಇದೇ ಆಸಕ್ತಿಯನ್ನು ಮಾತೃಭಾಷೆ ಕನ್ನಡ ಸಾಹಿತ್ಯ, ಶಾಲಾ-ಕಾಲೇಜುಗಳ ಪಠ್ಯ, ಬೋಧನೆಗಳಲ್ಲಿ ಬೆಳೆಸಿಕೊಂಡರೆ ವ್ಯಕ್ತಿಗತವಾಗಿ ಬೆಳೆದು, ದೇಶ ಮತ್ತು ಸಮಾಜವನ್ನು ಬೆಳಸಬಹುದು ಎಂದರು. ಯಾವುದೇ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಆದರೆ ಕನ್ನಡ‌ ಭಾಷೆಯನ್ನು ಎಂದಿಗೂ ಮರೆಯಬಾರದು, ಎಲ್ಲಾರಲ್ಲಿ ಕನ್ನಡ‌ ಭಾಷೆಯ ಬಗ್ಗೆ ಅಭಿಮಾನ‌ ಇರಬೇಕೆಂದು ಹೇಳಿದರು. ಬಳಿಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಆಯ್ಕೆಯಾದ 38 ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ಶಾಸಕರು ವಿತರಿಸಿದರು. ಸ್ವಚ್ಚ ಭಾರತ ಯೋಜನೆದಡಿಯಲ್ಲಿ ಸರ್ಕಾರದಿಂದ‌ ಬಂದಿರುವ ವಾಹನವನ್ನು ಪುರಸಭೆಗೆ ಶಾಸಕರು ಹಸ್ತಾಂತರಿಸಿದರು. ಬಳಿಕ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಕನ್ನಡಪರ ಹಾಡಿಗೆ ಶಾಲಾ‌ ಮಕ್ಕಳು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಅರಮನೆ ಸುಧಾ, ಸಿಪಿಐ ಬಾಲಚಂದ್ರ ‌ಲಕ್ಕಂ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಡಾ. ಶಿವಶರಣಪ್ಪ ಇತ್ಲಿ, ಶ್ರೀಶೈಲಪ್ಪ ಬ್ಯಾಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಡಾ.‌ಬಿ.ಹೆಚ್ ದಿವಟರ್. ಅಂದಾನೆಪ್ಪ ಗುಂಡಳ್ಳಿ, ಎಂ.ಅಮರೇಶ, ನೀರಾವರಿ ಇಲಾಖೆ ಅಧಿಕಾರಿ ಮಲ್ಲಯ್ಯ ಸೇರಿದಂತೆ ಇನ್ನಿತರ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!