
ಉದಯವಾಹಿನಿ ದೇವದುರ್ಗ:- ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ವಿಎಸ್ಎಸ್ಎನ್ ಕಾಂಪ್ಲೆಕ್ಸ್ ಆವರಣದಲ್ಲಿ ಬುಧವಾರದಂದು ಡಾಕ್ಟರ್ ವಿಷ್ಣು ಸೇನಾ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ಸೇನಾ ಸಮಿತಿಯ ನೇತೃತ್ವದಲ್ಲಿ ತಾಯಿ ಕನ್ನಡಾಂಬೇ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಾಷ್ಟ್ರೀಯ ಧ್ವಜ ಏರಿಸುವ ಮೂಲಕ 68 ನೇ ಕನ್ನಡ ರಾಜ್ಯೋತ್ಸವನ್ನು ಆಚರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ:- ಡಾಕ್ಟರ್ ವಿಷ್ಣು ಸೇನಾ ಸಮಿತಿ ತಾಲೂಕು ಅಧ್ಯಕ್ಷ ಅಯ್ಯಣ್ಣ ಕಟ್ಟಿಮನಿ,ಕರ್ನಾಟಕ ರಕ್ಷಣಾ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಟಿ ಜಯರಾಜ್ ಮಡಿವಾಳ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಮಾನಶಯ್ಯನಾಯಕ,ದೈಹಿಕ ಶಿಕ್ಷಕರಾದ ದೌಲತ್ ಸಾಬ್ ಹಾಗೂ ರಂಗನಾಥ, ವಿಷ್ಣು ಸೇನಾ ಸಮಿತಿ ಉಪಾಧ್ಯಕ್ಷ ಡಾ. ಹಮೀದ್ ,ವಾಲ್ಮೀಕಿ ಸಂಘಟನೆ ಕಾರ್ಯದರ್ಶಿ ಕೆ ವಿನೋದ ನಾಯಕ, ಕರ್ನಾಟಕ ರಕ್ಷಣಾ ಸೇನಾ ಸಮಿತಿ ಕಾರ್ಯದರ್ಶಿ ಶಿವುಪುತ್ರ ಉಪ್ಪಾರ,ಸುರೇಶ್ ಶಾಂತಿನಗರ, ಆಂದ್ರಪ್ರದೇಶದ ತೆನಾಲಿಯಲ್ಲಿ ಆಯೋಜಿಸಿದ್ದ 20 ನೇಯಸಬ್ ಜೂನಿಯರ್ ಜಂಪ್ ರೋಪ್ ರಾಷ್ಟ್ರ ಮಟ್ಟದ ಬಾಲಕರ ವಿಭಾಗದ ಸಿಂಗಲ್ ರೋಪ್ ಸ್ಪೀಡ್ ರಿಲೇಯಲ್ಲಿ ಬಂಗಾರದ ಪದಕ ಪಡೆದ ಮಹಾರಾಜ್ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,
