ಉದಯವಾಹಿನಿ ಬೆಂಗಳೂರು : ಮೈಸೂರು ರಾಜ್ಯವು 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ಜೊತೆಗೆ ಕನ್ನಡ ಭಾಷೆಕರಿಗಾಗಿ ಒಂದು ಪ್ರತ್ಯೇಕ ರಾಜ್ಯವಾಗಿ ಉದಯಿಸಿತು ಕರ್ನಾಟಕ ಏಕೀಕರಣ ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ಎಂಬುದಾಗಿ ನಾಮಕರಣ ಮಾಡಬೇಕೆಂಬ ಕರ್ನಾಟಕ ರಾಜ್ಯದ ಎಲ್ಲಾ ನಾಗರೀಕರ ಒಕ್ಕೊರಲಿನ ಆಶೋತ್ತರ ಪ್ರತಿಬಿಂಬಿಸುವ ವಿಶಿಷ್ಟವಾದ ಆಸೆ 1973ರಲ್ಲಿ ಕೈಗೂಡಿತ್ತು ಮೈಸೂರು ರಾಜ್ಯ ಉದಯವಾಗಿ 17 ವರ್ಷಗಳ ನಂತರ ಅಂದಿನ ಮುಖ್ಯಮಂತ್ರಿ ಆಗಿದ್ದಂತಹ ಡಿ ದೇವರಾಜ ಅರಸುರವರು ಮೈಸೂರು ರಾಜ್ಯವನ್ನು ಕರ್ನಾಟಕವೆಂದು 1973 ನವೆಂಬರ್ 1 ರಂದು ನಾಮಕರಣ ಮಾಡಿದರು ಜಯಚಾಮರಾಜೇಂದ್ರ ಒಡೆಯರ್ ಆಲೂರು ವೆಂಕಟರಾಯರು ರಾ ಹ ದೇಶಪಾಂಡೆ ಡೆಪ್ಯುಟಿ ಚೆನ್ನಬಸಪ್ಪ ಮಹಾನ್ ಹೋರಾಟಗಾರರ ಪರಿಶ್ರಮದ ಫಲವಾಗಿ ನಾವಿಂದು ಈ ಪುಣ್ಯ ಭೂಮಿಯಲ್ಲಿ ಕನ್ನಡ ರಾಜ್ಯೋತ್ಸವದ ಸವಿಯನ್ನು ಸವಿಯುತ್ತಿದ್ದೇವೆ ಅಂದು ಆ ಮಹನೀಯರ ಆಶಯದಂತೆ ಕನ್ನಡ ನಾಡು ನುಡಿಗಾಗಿ ಬದುಕಿ ಕನ್ನಡಮ್ಮನನ್ನು ಉಳಿಸಿ ಬೆಳೆಸಬೇಕು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಸ್ ಟಿ ಸೋಮಶೇಖರ್ ಗೌಡರು ಜನರಿಗೆ ತಿಳಿಸಿದರು. ಚುಂಚನಗುಪ್ಪೆ ಗ್ರಾಮ ಪಂಚಾಯತಿಯ ಅಧ್ಯಕ್ಷ. ಶ್ರೀಮತಿ ಪಂಕಜ ಚಂದ್ರಶೇಖರ್ ಉಪಾಧ್ಯಕ್ಷರಾದ ರಾಮಾಂಜನೇಯ ಗೌಡ ಸದಸ್ಯರಾದ ಸುಕುಮಾರ್ ಸಿಆರ್ ಮಾಜಿ ಅಧ್ಯಕ್ಷರಾದ ಗಂಗಾ ರೇವಣ್ಣ ನಿಂಗಪ್ಪ. ಮುನಿ ರಾಜಣ್ಣ ಗಣಪತಳ್ಳಿ ಸುರೇಶ್ ಸದಸ್ಯರ ಕುಮಾರ್ ಸಮಾಜ ಸೇವಕರಾದ ನಟರಾಜ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕೆಜಿ ಪುರುಷೋತ್ತಮ್ ಎಲ್ಲಾ ನಾಗರಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!