
ಉದಯವಾಹಿನಿ, ಬಂಗಾರಪೇಟೆ : ಕರ್ನಾಟಕ ರಾಜ್ಯ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸುಸಂಸ್ಕೃತ ರಾಜ್ಯವಾಗಿದೆ, ನಮ್ಮ ರಾಜ್ಯದಲ್ಲಿ ಅನೇಕ ಧರ್ಮಗಳು, ಜಾತಿಗಳು ,ಹಾಗೂ ಭಾಷೆಗಳಲ್ಲಿ ಅನೇಕ ಆಚಾರ ವಿಚಾರ ರೂಢಿ ಸಂಪ್ರದಾಯಗಳನ್ನು ಒಳಗೊಂಡಿದ್ದರೂ ಸಹ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡ ಭಾಷೆ ಸಾಮರಸ್ಯದ ಬೆಸುಗೆಗೆ ಅಮೃತ ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು .
ತಾಲೂಕಿನ ಆಲದ ಮರ ಬಳಿ ಇರುವ ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ.ವಿ. ಮಹೇಶ್ ರವರು ಕನ್ನಡ ಭಾಷೆ ಕಲೆ, ಸಾಹಿತ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿದೆ .ಹಲ್ಮಿಡಿ ಶಾಸನದಿಂದ ಪ್ರಾರಂಭವಾದ ಕನ್ನಡ ಸಾಹಿತ್ಯ ಕವಿರಾಜಮಾರ್ಗ ,ವಡ್ಡಾರಾಧನೆ ಹಾದಿಯಲ್ಲಿ ಸಾಗಿ ಹಿಂದೂ ಧರ್ಮದ ಗ್ರಂಥ ರಾಮಾಯಣ ದರ್ಶನಂ ನಿಂದ ಇಂದಿನವರೆಗೂ ತನ್ನದೇ ಆದ ಅಧಿಪತ್ಯವನ್ನು ಸ್ಥಾಪಿಸಿದೆ .ಇದರೊಟ್ಟಿಗೆ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಎಂಟು ಕನ್ನಡ ಜ್ಞಾನಪೀಠ ಪ್ರಶಸ್ತಿಗಳು ,ಚಲನಚಿತ್ರ ಕ್ಷೇತ್ರದಲ್ಲಿ 71ಕ್ಕೂ ಹೆಚ್ಚು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ವಿಶ್ವದಲ್ಲಿಯೇ ಅಗ್ರಮಾನ್ಯ ಸ್ಥಾನದಲ್ಲಿರುವುದು ಕನ್ನಡದ ಗೌರವ ಮತ್ತು ಪ್ರತೀಕದ ಸಂಕೇತವಾಗಿದೆ ,
ಆದರೆ ಇಂದಿನ ರಾಜಕಾರಣ ತತ್ವ ಸಿದ್ಧಾಂತಗಳಿಗೆ ಸೀಮಿತವಾಗಿದೆಯೇ ಹೊರತು ನಾಡ ಹಬ್ಬದ ಆಚರಣೆಗೆ ಅಲ್ಲ .ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಅಂಬೇಡ್ಕರ್ ವೃತ್ತವನ್ನು ಬಿಜೆಪಿ ವೃತ್ತವೆಂದು ಪ್ರತಿಬಿಂಬಿಸಲು ಹೊರಟಿರುವುದು ಅಕ್ಷಮ್ಯ .ಆದರೆ ಇಂದು ಅಂಬೇಡ್ಕರ್ ವೃತ್ತದಲ್ಲಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ರಾಜಕೀಯೇ ತರವಾಗಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಮತ್ತು ಕಾರ್ಯಕರ್ತರು ಒಟ್ಟಿಗೆ ಸೇರಿ ಒಮ್ಮತದೊಂದಿಗೆ ಆಚರಿಸಬೇಕೆಂದು ತಿಳಿಸಿದರು .ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಸುರೇಶ್ ,ಕರುಣಾಮೂರ್ತಿ , ಮುಖಂಡರಾದ ಮಾಟಣ್ಣ ,ಚಂದ್ರ ಶೇಖರ್,ರಾಜರತ್ನಂ ಸುರೇಂದ್ರ,ಕೆಂಪಣ್ಣ, ರಾಜಕುಮಾರ್, ವೆಂಕಟೇಶಮೂರ್ತಿ ಕುಟ್ಟಿ, ಮೋಹನ್, ಗ್ರಾ. ಪಂ. ಮಾಜಿ ಉಪಾಧ್ಯಕ್ಷೆ ರಾಧಮ್ಮ, ಸವಿತಾ ಬಾಬು ,ರಾಣಿ ಗೋವಿಂದರಾಜು,ವಿಕ್ಟೋರಿಯಾ ಪುಣ್ಯ ಮೂರ್ತಿ , ಇನ್ನು ಮುಂತಾದವರು ಹಾಜರಿದ್ದರು.
