ಉದಯವಾಹಿನಿ ಮುದ್ದೇಬಿಹಾಳ ; ಬುಧುವಾರ ಮುದ್ದೇಬಿಹಾಳ ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣದ ಪ್ರೌಢಶಾಲೆಗಳಿಂದ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ ಕವಿಗಳ ಸ್ತಬ್ಧ ಮಾಡಿಕೊಂಡು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಳ್ಳವಂತೆ ಸೂಚಿಸಲಾಗಿತ್ತು ಅದರಂತೆ ಎಲ್ಲಾ9 ಪ್ರೌಢಶಾಲೆಗಳು ಜ್ಞಾನ ಪೀಠ ಪ್ರಶಸ್ತಿ ವಿಜೇತ ರ ಛದ್ಮವೇಷದಲ್ಲಿ ವಿದ್ಯಾರ್ಥಿಗಳನ್ನು ಕರೆತಂದಿದ್ದರು ಇದರಲ್ಲಿ ಎರಡು ಪ್ರೌಢಶಾಲೆಗಳು ಬಸವ ಇಂಟರ್ ನ್ಯಾಶನಲ್ ಸ್ಕೂಲ್ ಹಾಗೂ ಅಭ್ಯೋದಯ ಇಂಟರ್ ನ್ಯಾಶನಲ್ ಸ್ಕೂಲ್ ತಮ್ಮ ಹೈಸ್ಕೂಲ್ ಹೆಸರನ್ನು ಆಂಗ್ಲಭಾಷೆಯಲ್ಲಿ ಬರೆದು ಕೊಂಡು ಬಂದ ಬ್ಯಾನರ್ ಸಾಹಿತಿಗಳ ಹಿಂದೆ ಹಾಕಿದ್ದರು ಇದನ್ನು ಗಮನಿಸಿದ ಕನ್ನಡಪರ ಸಂಘಟನೆಯ ಮಲ್ಲಿಕಾರ್ಜುನ ಗಂಗನಗೌಡರ, ಹುಸೇನ್ ಮುಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಕಗ್ಗೊಲೆ ಆಗಿದೆ ಕನ್ನಡ ಭಾಷೆ ಗೆ ಮಾಡಿರುವ ಅಪಮಾನವಾಗಿದೆ ತಾಲೂಕು ಆಡಳಿತ ಈ ಶಾಲೆಗಳ‌‌‌ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು ತಾಲೂಕು ಆಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ನಾವು ಈ ಕನ್ನಡ ಭಾಷೆಯ ಅಗೌರವ ತೋರಿದ ಈ ಶಾಲೆಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಬಾರದು ಎಂದರು ಶಾಲೆಗೆ ಕಳುಹಿಸಿ ಕೊಡುವುದಾಗಿ ಹೇಳಿದ್ದುನ್ನು ಖಂಡಿಸುವುದಾಗಿ ಹೇಳಿದರು ತಾಲೂಕ ಆಡಳಿತ ಕನ್ನಡ ರಾಜ್ಯೋತ್ಸವದವದ ಪೂರ್ವಭಾವಿ ಸಭೆಗೆ ಕನ್ನಡ ಪರ ಸಂಘಗಳಿಗೆ ಮತ್ತು ಮಾಧ್ಯಮ‌ಮಿತ್ರರನ್ನು ಕರೆಯದೆ ಸಭೆ ಮಾಡಲಾಗಿದೆ, ಪ್ರತಿ ಮನೆಯ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂದು ಸರಕಾರದ ಆದೇಶ ವಿದೆ‌ ಅದು ತಾಲೂಕಿನಲ್ಲಿ ಪಾಲನೆ ಮಾಡಿಲ್ಲ ,ಅಗಸ್ಟ್ ತಿಂಗಳಲ್ಲಿ ತಾಲೂಕು ಆಡಳಿತದಿಂದ ಸನ್ಮಾನ ಮಾಡಲಾಗಿದ್ದ ಯಲಗೋರೇಶ ನಾಯಕ ಕುಟುಂಬಕ್ಕೆ ಮತ್ತೆ ರಾಜ್ಯೋತ್ಸವದಲ್ಲಿ ಸನ್ಮಾನ ಮಾಡಲಾಗಿದೆ ತಾಲೂಕಿನಲ್ಲಿ ಅನೇಕ‌‌‌ ಸಾಧಕರಿದ್ದರು ಗುರುತಿಸಿಲ್ಲ ಮತ್ತು ಕಳೆದ ಬಾರಿ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ ಕಬ್ಬಿಣದ ರಥಶಿಲ್ಪಿ ಪರಶುರಾಮ ಪವಾರ ಅವರಿಗೆ ಆಹ್ವಾನ ನೀಡಿಲ್ಲ, ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ, ಪೋಲಿಸರು ನೀರಿನ ವ್ಯವಸ್ಥೆ ಮಾಡಿದರು ಎಂದು ತಾಲೂಕು ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಹುತೇಕ ಸರಕಾರಿ ಇಲಾಖೆಗಳ ಅಧಿಕಾರಿಗಳು, ಪುರಸಭೆ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಗೈರಾಗಿದ್ದು ಎದ್ದು ಕಾಣುತ್ತಿತ್ತು , ಗೈರಾದ ಸರಕಾರಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ತಹಶಿಲ್ದಾರ ಅವರಿಗೆ ಕನ್ನಡ ಸಂಘಟನೆಯ ಪ್ರಮುಖರು ಒತ್ತಾಯಿಸಿದ ಘಟನೆ ಜರುಗಿತು

Leave a Reply

Your email address will not be published. Required fields are marked *

error: Content is protected !!