
ಉದಯವಾಹಿನಿ ಅರಸೀಕೆರೆ: ಅಂಗನವಾಡಿ ಕೇಂದ್ರಗಳೆಂದರೆ ನಾಡ ಹಬ್ಬ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಷ್ಟೇನೂ ವಿಶಿಷ್ಟವಾಗಿ ಪರಿಗಣಿಸುವುದಿಲ್ಲ ಆದರೆ
ಅರಸೀಕೆರೆ ತಾಲ್ಲೂಕಿನ ದುಮ್ಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸೀಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಬಹಳ ವಿಜೃಂಭಣೆಯಿಂದ ಅಂಗನವಾಡಿ ಕೇಂದ್ರವನ್ನು ಸಿಂಗರಿಸಿ ದೀಪಾ ಹಚ್ಚಿ ರಂಗೋಲಿ ಬಿಡಿಸುವುದರ ಮೂಲಕ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಸಾರ್ವಜನಿಕರ ಗಮನ ಸೆಳೆದರು… ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಯುತ ಟಿ.ಜೆ.ಶಂಕರಮೂರ್ತಿ ಸರ್ ರವರ ಹಾಗೂ ಮೇಲ್ವಿಚಾರಕರಾದ ಶ್ರೀಮತಿ ಪುಷ್ಬಾವತಿ ಮೇಡಂ ರವರ ಆದೇಶದ ಮೇರೆಗೆ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಅಂಜಲಿ.ಡಿ.ವಿ ಹಾಗೂ ಸಹಾಯಕಿಯವರಾದ ವನಿತಾ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಇಂದ್ರಾಣಿ ಮೇಡಂರವರು ಮತ್ತು ಶ್ರೀಯುತ ಶಶಿಧರ್ ಮೂರ್ತಿ ಸರ್ ರವರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು ಮತ್ತು ಈ ಸಂಭ್ರಮಾಚರಣೆಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳು. ಕಿಶೋರಿಯರು. ಗ್ರಾಮಸ್ಥರು. ಹಾಜರಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೇರಗು ತಂದಿತು ಎಲ್ಲರಿಗೂ ಸಿಹಿ ಹಂಚಿ ದೀಪ ಬೇಳಗಿಸಿ ಕರ್ನಾಟಕಕ್ಕೆ 50 ರ ಸಂಭ್ರಮಾಚರಣೆ ಸಂಭ್ರಮಿಸಲಾಯಿತು
