
ಉದಯವಾಹಿನಿ ಯಾದಗಿರಿ: ತಾಲ್ಲೂಕಿನ ತಾತಳಗೇರಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ, ನವೆಂಬರ್01 1956 ರಲ್ಲಿ ಆಲೂರು ವೆಂಕಟರಾಯ ರವರು ಮೈಸೂರ್ ಕರ್ನಾಟಕ ಎಂದು ನಾಮಕರಣ ಮಾಡಿದರು. ಇವರು ಪ್ರಕಾರ ಇವತ್ತಿನವರಿಗೆ 67 ನೆಯ ಕನ್ನಡ ರಾಜ್ಯೋತ್ಸವ ಎಂದು ಆಚರಣೆ ಮಾಡಿದ್ದೇವು.
ನವೆಂಬರ್. 01= 1973 ರಲ್ಲಿ.ಡಿ. ದೇವರಾಜ್ ಅರಸ ರವರು. ನಮ್ಮ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಆಗಿದ್ದಾಗ ನಮ್ಮ ಮೈಸೂರ್ ಕರ್ನಾಟಕದ ಎಂಬ ಹೆಸರು ತೆಗೆದು ಹಾಕಿ ಕರ್ನಾಟಕ ಎಂದು ಮರು ನಾಮ ಕರಣ ಮಾಡಿದರು ಅಂದ ಹಾಗೆ ಕರ್ನಾಟಕ ಎಂಬ ಹೆಸರು ಬಂದು ಇಲ್ಲಿಗೆ 5೦ ವರ್ಷಗಳಾಗಿದ್ದು, ಇದು 5೦ನೇ ವರ್ಷದ ಆಚರಣೆಯಾಗಿದೆ ಎಂದರು. 5೦ನೆಯ ಅರ್ಧ ಶತಮನೋತ್ಸವದ ಸಂತೋಷದ ಆಚರಣೆಯ ನಿಮಿತ್ಯವಾಗಿ ನಮ್ಮ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡದ 111 ಅಡಿ ಉದ್ದದ ಭಾವುಟವು ಶಾಲೆಯ ಮಕ್ಕಳ ಜೊತೆಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.ಶಾಲೆಯ ಮುಖ್ಯಗುರು ಶರಣಪ್ಪ ಸ್ವಾಗತ ಭಾಷಣ ಮಾಡಿದರು. ವಂದನಾರ್ಪಣೆಯನ್ನು ಅತಿಥಿ ಶಿಕ್ಷಕಿಯರಾದ ಗೌರಮ್ಮ ಇವರು ಮಾಡಿದರು. ಈ ಸಮಾರಂಭದಲ್ಲಿ ಸಹ ಶಿಕ್ಷಕರಾದ ಪ್ರಕಾಶ, ಮಹಾಲಿಂಗಪ್ಪ, ಮಾದೇವಮ್ಮ, ತೋಟೇಂದ್ರ, ಗೌರಮ್ಮ, ಸವಿತಾ, ಹಾಗೂ ಇತರರು ಇದ್ದರು.
