ಉದಯವಾಹಿನಿ ಶಿಡ್ಲಘಟ್ಟ: ನಮ್ಮ ಕರ್ನಾಟಕ ರಾಜ್ಯ ಎಂದು ಹೆಸರು ಬಂದು 50 ವರ್ಷಗಳು ಪೂರೈಸಿದ್ದಕ್ಕಾಗಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಪ್ರತಿ ಗ್ರಾಮ ಪಂಚಾಯಿತಿಯಿಂದ ಕನ್ನಡಾಂಬೆಯ ಪಲ್ಲಕ್ಕಿಗಳ ಮೆರವಣಿಗೆಯನ್ನು ಮಾಡಬೇಕು ಎಂದು ಆದೇಶಿಸಿದ್ದರೆ ಅದನ್ನು ಗಾಳಿಗೆ ತೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದಿದ್ದರೆ ಏನಾಗುತ್ತದೆ ಬಿಡಿ ಎಂಬ ಧೋರಣೆಯಿಂದ ತಾಲೂಕಿನ ಹಲುವು ಪಂಚಾಯಿತಿಗಳಲ್ಲಿ ಕೊತ್ತನೂರು ಗ್ರಾಮ ಪಂಚಾಯಿತಿಯು ಒಂದಾಗಿದೆ ಎಂದು ಸಮಾಜಸೇವಕ ಪಂಚಾಕ್ಷರರೆಡ್ಡಿ ಅಕ್ರೋಶ ವ್ಯಕ್ತಪಡಿಸಿದರು.ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿಯಲ್ಲಿ ಕನ್ನಡಪರ ಹೋರಾಟಗಾರರು ಹಾಗೂ ಗ್ರಾಮ ಪಂಚಾಯತಿಯ ಮುಖಂಡರು ಗುರುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ,ನಂತರ ಗ್ರಾಮ ಪಂಚಾಯತಿ ಅಧಿಕಾರಿಗಳು ರಾಜ್ಯೋತ್ಸವವನ್ನು ಧಿಕ್ಕರಿಸಿರುವುದಕ್ಕಾಗಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.ಕೊತ್ತನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪವಿತ್ರ ಅವರು ಕನ್ನಡ ರಾಜ್ಯೋತ್ಸಕ್ಕೆ ಯಾವುದೇ ಪಲ್ಲಕ್ಕಿಗಳ ರಥವನ್ನು ಏರ್ಪಡಿಸದೆ ಕನ್ನಡದ ನಾಡಹಬ್ಬವನ್ನು ಕೇವಲವಾಗಿ ನೋಡಿ, ಅವಮಾನ ಮಾಡಿದ್ದಾರೆ. ನಾಡಹಬ್ಬಗಳ ಆಚರಣಾ ಸಮಿತಿಯ ಆದೇಶವನ್ನು ಗಾಳಿಗೆ ತೂರಿ ಬೇಜವಾಬ್ದಾರಿ ತೋರಿದ್ದಾರೆ. ಇಂತಹ ಅಧಿಕಾರಿಗಳನ್ನ ಈ ಕೂಡಲೇ ಅಮಾನತ್ತು ಮಾಡಬೇಕು. ಗ್ರಾಮ ಪಂಚಾಯತಿ ಅಧ್ಯಕ್ಷರು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವಾದರೆ ಇದು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ಗ್ರಾಮ ಮುಖಂಡ ಪಂಚಾಕ್ಷರಿರೆಡ್ಡಿ ತೀರ್ವ ವಿರೋಧ ವ್ಯಕ್ತಪಡಿಸಿ ಪಂಚಾಯತಿಯ ಮೇಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಇಲ್ಲವಾದಲ್ಲಿ ಎಷ್ಟು ದಿನವಾದರೂ ಸರಿ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ,ಆಮರಣಾಂತರ ಸತ್ಯಾಗ್ರಹ ಮಾಡುತ್ತೇವೆ ಎಂದು ಅಭಿವೃದ್ದಿ ಅಧಿಕಾರಿಗಳ ವಿರುದ್ಧ ದಿಕ್ಕಾರಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ತೇಜ್ ಸ್ವರೂಪ್ ರೆಡ್ಡಿ, ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್,ಆಂಜಿನಪ್ಪ,ತಬ್ಶಿ,ಸಲ್ಮಾನ್ ಮತ್ತು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
ಕನ್ನಡ ರಾಜ್ಯೋತ್ಸವ ಕುರಿತು ಅಭಿವೃದ್ಧಿ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಮತ್ತು ಇದರ ಬಗ್ಗೆ ಪೂರ್ವಬಾವಿ ಸಭೆಯೂ ನಡೆಸಿರಲಿಲ್ಲ.ಕಾರ್ಯಕ್ರಮದ ದಿನ ನನಗೆ ದೂರವಾಣಿ ಮೂಲಕ ಕರೆ ಮಾಡಿ ರಾಜ್ಯೋತ್ಸವ ಆಚರಣೆ ಮಾಡಲು ಬರಬೇಕು ಅಂದ್ರು. ನಾನು ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಿನಿ ನೀವು ಕಾರ್ಯಕ್ರಮ ಮುಗಿಸಿ ಎಂದು ತಿಳಿಸಿದ್ದೇನೆ. ಆದರೆ ಪಿಡಿಓ ಮೇಡಂ ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ನಮ್ಮನ್ನ ಅವರು ಕೇವಲವಾಗಿ ನೋಡುವುದಲ್ಲದೆ, ಜಾತಿ ತಾರತಮ್ಯ ಮಾಡುತ್ತಾರೆ. ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ನಮ್ಮದು ಯಾವುದೇ ಪಾಲು ಇಲ್ಲ. ಇದರ ಸಂಪೂರ್ಣ ಹೊಣೆಯನ್ನು ಅಭಿವೃದ್ಧಿ ಅಧಿಕಾರಿಗಳು ಹೊಂದಿರುತ್ತಾರೆ. – ಪಾರ್ವತಮ್ಮ ಶ್ರಿನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ.

Leave a Reply

Your email address will not be published. Required fields are marked *

error: Content is protected !!