
ಉದಯವಾಹಿನಿ ಸಿಂಧನೂರು: 1961 – 1974ರಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆಯನ್ನು ಭಾರಿ ಭೂಮಾಲೀಕರು ಹಾಗೂ ಅಧಿಕಾರಿಗಳು ಬುಡಮೇಲು ಮಾಡಿ, ಬಡವರಿಗೆ ಹಂಚಬೇಕಾದ ಹೆಚ್ಚುವರಿ ಭೂಮಿಯನ್ನು ಕಳ್ಳ ದಾರಿಯಲ್ಲಿ ಭೂಮಾಲೀಕರಿಗೆ . ಹಿಂದಿರುಗಿಸಿದ್ದಾರೆ. ಎಂದರೆ ಇದಕ್ಕೆ ಜವಳಗೇರಾ ನಾಡಗೌಡರ 4900 ಎಕರೆ ಭೂ ಹಗರಣ ಸುಪ್ರೀಮ್ ಸಾಕ್ಷಿಯಾಗಿದೆ. ಎಂದು ಹೇಳಿದರುನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಸಂಚಾಲಕ ಆರ್ ಮಾನಸಯ್ಯ ಅವರು ಜಿಲ್ಲೆಯಲ್ಲಿ ಎಲ್ಲಾ ಭೂಮಾಲೀಕರು ಇವತ್ತಿಗೂ ಸಾಕಷ್ಟು ಭೂಮಿಯನ್ನು ಹೊಂದಿದ್ದಾರೆ. “ದೇವರಾಜು ಅರಸು ಸರಕಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಭೂರಹಿತರಿಗೆ ಭೂಮಿ ಹಂಚಲಾಗಿದೆ” ಎಂಬ ಸರಕಾರಿ ಪ್ರಕಟಣೆಯೂ ಸುಪ್ರೀಮ್ ಸುಳ್ಳುಗಳಿಂದ ಕೂಡಿದೆ ಎಂದು ಆರೋಪಿಸಿದರು.ಇದಕ್ಕೆ ಕಾರಣ,ಜವಳಗೇರಾ ನಾಡಗೌಡರ ಪ್ರಕರಣವು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಹೆಚ್ಚುವರಿ ಭೂ ಪ್ರಕರಣಗಳನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961 ಸೆಕ್ಷನ್ 122(ಎ) ಅಡಿ ಮರು ವಿಚಾರಣೆ ನಡೆಯಿಸಬೇಕೆಂದು ದಿ: 18-10-2023 ರಂದು ಸಿಂಧನೂರು ತಹಶೀಲ್ದಾರರು, ಲಿಂಗಸೂಗೂರು ಸಹಾಯಕ ಆಯುಕ್ತರು ಹಾಗೂ ರಾಯಚೂರು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಭೂರಹಿತರ ಪರವಾಗಿ ಪಿಟೇಷನ್ ನೀಡಲಾಗಿದೆ. ಎಂದರುಆದರೆ, ಅಧಿಕಾರಿಗಳು ಗಪ್‌ಚುಪ್ ಆಗಿದ್ದಾರೆ. ಆದ್ದರಿಂದ ಇದೇ ನವೆಂಬರ್ 6 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಜವಳಗೇರಾ ಪ್ರಕರಣದಲ್ಲಿ 64 ಎಕರೆ 29 ಗುಂಟೆ ಹೆಚ್ಚುವರಿ ಭೂಮಿಯಲ್ಲಿ ಇಲ್ಲಿ ಭೂರಹಿತ ಕೃಷಿ ಕಾರ್ಮಿಕರು ನಡೆಸಿರುವ ಅನಿರ್ದಿಷ್ಟ ಹಗಲು ರಾತ್ರಿ ಧರಣಿ 28 ದಿನಕ್ಕೆ ಕಾಲಿಟ್ಟಿದೆ.ಜಮೀನಿನಲ್ಲಿ ಭೂರಹಿತರು ಮಾಡುತ್ತಿರುವ ಸಾಗುವಳಿಗೆ ಸಿಂಧನೂರು ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡರು ಮೌನವಹಿಸಿದ್ದಾರೆ.ಏಕೆ ಎಂಬ ಪ್ರಶ್ನೆ..,?? ಜಿಲ್ಲಾಧಿಕಾರಿಗಳು ಕರ್ತವ್ಯ ಪಾಲನೆ ಮಾಡುತ್ತಿಲ್ಲ. 39 ವರ್ಷಗಳಿಂದ ನಾಡಗೌಡರ ಕಾನೂನು ಬಾಹೀರ ಸಾಗುವಳಿ ತಡೆಯದ ಅಧಿಕಾರಿಗಳು, ಈಗ ಕಾನೂನು-ಕರ್ತವ್ಯ ಎಂದು ಭೂರಹಿತ ಕೃಷಿ ಕಾರ್ಮಿಕರ ಸಾಗುವಳಿಗೆ ಅಡ್ಡಗಾಲ್ಹಾಕುತ್ತಿದ್ದಾರೆ. ಈ ರೀತಿಯ ಬೆದರಿಕೆ ಹಾಗೂ ಸಾಗುವಳಿ ತಡೆಯುವ ಕ್ರಮವನ್ನು ಖಂಡಿಸಿ 06-11-2023 ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.ಪೊಲೀಸರು ಕಾನೂನು ಸುವ್ಯವಸ್ಥೆ ಹೆಸರಲ್ಲಿ ಭೂ ಮಾಲೀಕ ನಾಡಗೌಡರ ಪರ ಪದ ಹಾಡುವುದನ್ನು ನಿಲ್ಲಿಸಬೇಕು. ಎಂದು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದರು.ಈ ಸಂದರ್ಭದಲ್ಲಿ .ಆರ್. ಮಾನಸಯ್ಯ.ಪಾಲಿಟಿ ಬ್ಯೂರೊ ಸದಸ್ಯರು.ಸಿಪಿಐ(ಎಂ ಎಲ್) ರೆಡ್ ಸ್ಟಾರ್.ಎಂ.ಡಿ.ಅಮೀರ್ ಅಲಿ.ಮಲ್ಲಯ್ಯ ಕಟ್ಟಿಮನಿ ಜಿಲ್ಲಾಧ್ಯಕ್ಷರು.ಕರ್ನಾಟಕ ರೈತ ಸಂಘ. ಎಂ ಗಂಗಾಧರ್ . ಹನುಮಂತಪ್ಪ ಗೋಡ್ಯಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು
