ಉದಯವಾಹಿನಿ ಸಿರುಗುಪ್ಪ : ನಗರದ ೨೮ನೇ ವಾರ್ಡಿನ ಹೆಳವರ ಓಣಿಯಲ್ಲಿನ ಶ್ರೀ ಹುಲಿಗೆಮ್ಮ ದೇವಿ ೮ನೇ ವಾರ್ಷಿಕ ಪ್ರತಿಷ್ಟಾಪನೆಯ ಅಂಗವಾಗಿ ದೇವಸ್ಥಾನದಲ್ಲಿ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೀದರ್ ಜಿಲ್ಲೆಯ ದುಮ್ಮನಸೂರ ಹೆಳವ ಸಮಾಜದ ಮುಕ್ತಿನಾಥ ಜನ ಕಲ್ಯಾಣ ಟ್ರಸ್ಟ್ ಮಠದ ಶ್ರೀಶಂಕರಲಿAಗಸ್ವಾಮಿ ಅವರು ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ದೇವಸ್ಥಾನ ಆಡಳಿತದಿಂದ ಮನೆಯ ಮಗಳಂತೆ ಎಲ್ಲರನ್ನೂ ತವರಿನ ಸ್ಥಾನದಲ್ಲಿ ನಿಂತು ಉಡಿ ತುಂಬಿದ್ದರಿ0ದ ಜಗನ್ಮಾತೆಯು ಸಂತೃಪ್ತಳಾಗಿ ಆಶೀರ್ವದಿಸುತ್ತಾಳೆಂದರು.
ಶ್ರೀ ಹುಲಿಗೆಮ್ಮ ದೇವಿ ಟ್ರಸ್ಟ್ ವತಿಯಿಂದ ಕಳೆದ ವರ್ಷ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಸಮಾಜದ ವಿದ್ಯಾರ್ಥಿಗಳನ್ನು ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಸನ್ಮಾನಿಸಿದರು. ಟ್ರಸ್ಟಿನ ಅಧ್ಯಕ್ಷ ವೈ.ಡಿ.ವೆಂಕಟೇಶ ಮಾತನಾಡಿ ಶ್ರೀ ಹುಲಿಗೆಮ್ಮ ದೇವಿಯ ಶಿಲಾಮೂರ್ತಿ ಪ್ರತಿಷ್ಟಾಪನೆಯ ೮ನೇ ವಾರ್ಷಿಕವಾಗಿದ್ದು, ಪ್ರತಿವರ್ಷದಂತೆ ಟ್ರಸ್ಟಿನ ವತಿಯಿಂದ ದೇವಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿಯೊ0ದಿಗೆ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಅನ್ನಸಂತಪರ್ಣೆಯನ್ನು ನಡೆಸಲಾಗಿದೆಂದರು. ಇದೇ ವೇಳೆ ನಗರಸಭೆ ಸದಸ್ಯೆ ವೈ.ಡಿ.ಲಕ್ಷಿö್ಮದೇವಿ, ಮುಖಂಡರಾದ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಹನುಮಪ್ಪ, ಮಹಾದೇವ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು
