ಉದಯವಾಹಿನಿ, ಕೆ.ಆರ್.ಪುರ: ವಿರಾರು ಜನ ಅನ್ಯ ರಾಜ್ಯಗ ಳಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಇನ್ನಿತರ ಕಾರಣಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಪರ ಭಾಷಿಕರಿಗೆ ನಾವೆಲ್ಲರೂ ಕನ್ನಡ ಕಲಿಸಲು ಮುಂದಾಗಬೇಕು ಎಂದು ಅಂಬೇಡ್ಕರ್ ನಗರ ಶಾಲೆಯ ಎಸ್.ಡಿ.ಎಂ.ಸಿ ಮುಖ್ಯಸ್ಥರಾದ ಇಟ್ಟಾಚ್ಚಿ ಮಂಜುನಾಥ್ ತಿಳಿಸಿದ್ದಾರೆ.
ಕ್ಷೇತ್ರದ ರಾಮಮೂರ್ತಿ ನಗರ ಅಂಬೇಡ್ಕರ್ ನಗರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ರೊಂದಿಗೆ ಕನ್ನಡ ಧ್ವಜಾರೋಹಣ ಮಾಡಿದರು. ಕರ್ನಾಟಕಕ್ಕೆ ೫೦ ವರ್ಷದ ಸಂಭ್ರಮದಲ್ಲಿ ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಕಛೇರಿ ಹಾಗೂ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಇದೇ ಪ್ರಥಮವಾಗಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರ ಮದಿಂದ ಆಚರಣೆ ಮಾಡಲಾಯಿತು ಎಂದರು. ಅನ್ಯ ರಾಜ್ಯಗಳಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಬಯಸಿ ನಮ್ಮ ರಾಜ್ಯಕ್ಕೆ ಅದರಲ್ಲಿ ಬೆಂಗಳೂರಿಗೆ ಬಂದು ನೆಲೆಸಿರುವ ಪರ ಭಾಷಿಕರಿಗೆ ನಾವೆಲ್ಲರೂ ಕನ್ನಡ ಕಲಿಸಲು ಮುಂದಾಗಬೇಕು ಅಲ್ಲದೆ ಕನ್ನಡ ಭಾಷೆ, ನೆಲ, ಜಲವನ್ನು ಉಳಿಸುವುದು ನಮ್ಮೆಲ್ಲರ ಜವಬ್ದಾರಿಯಾಗಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
