
ಉದಯವಾಹಿನಿ, ಸಿಂಧನೂರು:ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ದಲಿತ ಮುಖಂಡ ಪ್ರಸಾದ್ ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮತ್ತು ದಲಿತ ಸಮುದಾಯದವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಕೊಲೆಯಂತ ದುಷ್ಕೃತ್ಯಗಳ ಕಡಿವಾಣಕ್ಕೆ ಕಠಿಣ ಕಾನೂನು ಕ್ರಮಗಳನ್ನು ಜಾರಿ ಮಾಡಲು ಆಗ್ರಹ.
ಈ ಪ್ರತಿಭಟನೆ ಕುರಿತು ಮಾತನಾಡಿದ ಸಂಚಾಲಕ ನಾಗರಾಜ ಪೂಜಾರ ಅವರು ಮದ್ಲಾಪುರ ಗ್ರಾಮದ ದಲಿತ ಮುಖಂಡ ಪ್ರಸಾದ (35) ಎಂಬುವವರನ್ನು ಗ್ರಾಮದ ಹೊರ ವಲಯದಲ್ಲಿ ದಿನಾಂಕ: ೩೦-೧೦-೨೦೨೩ರಂದು ಜಾತಿ ವೈಷಮ್ಯದ ಕಾರಣಕ್ಕೆ ದುಷ್ಕರ್ಮಿಗಳು ಮಾರಕಾಸ್ತಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದು,ಈ ಪೈಶಾಚಿಕ ದುಷ್ಕೃತ್ಯವನ್ನು ಸಿಂಧನೂರು ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಎಂದು ಹೇಳಿದರು.
ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಈ ದುಷ್ಕೃತ್ಯದ ಪ್ರಮುಖ ಸೂತ್ರದಾರಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ರಬ್ಬಣಕಲ್ ಗ್ರಾಮದ ಸಮೀಪದಲ್ಲಿರುವ ತಮ್ಮ ಹೊಲಕ್ಕೆ ಪ್ರಸಾದ್ ಮತ್ತು ಅವರ ಸಹೋದರ ಬೈಕ್ ಮೇಲೆ ಹೋಗುತ್ತಿರುವ ಸಂದರ್ಭದಲ್ಲಿ ಹೊಲದ ಬಳಿ ಆಗಲೇ ಕಾದು ಕುಳಿತಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತçಗಳಿಂದ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದೆ.ಕಳೆದ ಮೂರ್ನಾಲ್ಕು ವರ್ಷಗಳಿಂದ,ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ ವಾತಾವರಣ ಮನೆಮಾಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ.
ರಾಜ್ಯದಲ್ಲಿ ಕಳೆದ ಮರ‍್ನಾಲ್ಕು ತಿಂಗಳಲ್ಲಿ ದಲಿತ ಮುಖಂಡರ ಮೇಲೆ ದೌರ್ಜನ್ಯ, ಕೊಲೆ ಹಾಗೂ ದಬ್ಬಾಳಿಕೆಗಳು ನಿರಂತರ ಮುಂದುವರಿದಿವೆ. ಕೋಲಾರ ಜಿಲ್ಲೆಯ ಶ್ರೀನಿವಾಸರಪುರದಲ್ಲಿ ದಲಿತ ಮುಖಂಡ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ನಾಡ ಗುಡ್ಡೆಯಂಗಡಿಯಲ್ಲಿ ದಲಿತ ಮುಖಂಡ ಸುರೇಶ್ ಮತ್ತು ಸುಕುಮಾರ್ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ರಾಜ್ಯದಲ್ಲಿ ಸಾಲು ಸಾಲು ದುಷ್ಕೃತ್ಯಗಳು, ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರ ಮೂಕ ಪ್ರೇಕ್ಷನಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಸರ್ಕಾರ ದಲಿತ ಮುಖಂಡರು ಹಾಗೂ ಸಮುದಾಯದವರ ಮೇಲೆ ನಡೆಯುತ್ತಿರುವ ಕೊಲೆ, ದಬ್ಬಾಳಿಕೆಗಳನ್ನು ತಡೆಗಟ್ಟೆಗಲು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು, ಸಚಿವ ಸಂಪುಟ ಸಭೆ ಕರೆದು ಅಸ್ಪೃಶ್ಯತೆ ಆಚರಣೆ, ಜಾತಿ ವೈಷಮ್ಯ ಸೇರಿದಂತೆ ದಲಿತ ಸಮುದಾಯದವರ ಸೂಕ್ತ ಭದ್ರತೆಗೆ ಕಠಿಣ ಕಾನೂನ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ. ಆಗ್ರಹಿಸುತ್ತೇವೆ. ಈ. ಸಂ: ನಾಗರಾಜ ಪೂಜಾರ್ , ಮಂಜುನಾಥ ಗಾಂಧಿನಗರ, ಪರುಶುರಾಮ ಭಂಡಾರಿ, ಆರ್.ಎಚ್ ಕಲಮಂಗಿ, ಬಿ.ಎನ್ ಯರದಿಹಾಳ, ಚಿಟ್ಟಿಬಾಬು, ವೆಂಕಟೇಶ ಗಿರಿಜಾಲಿ, ರಮೇಶ್ ಪಾಟೀಲ್, ಇಂದ್ರಮ್ಮ, ಮರಿಯಮ್ಮ, ಹುಲ್ಲೇಶ, ಬಸವರಾಜ ಕೊಂಡೆ, ಇತರರು ಇದ್ದರು.
