ಉದಯವಾಹಿನಿ, ಬೆಂಗಳೂರು : ಕಳವು ಮಾಡಿದ ಬೈಕ್ ನಲ್ಲಿ ಸಂಚರಿಸುತ್ತ ಒಂಟಿಯಾಗಿ ಓಡಾಡುವವರನ್ನು ಹಿಂಬಾಲಿಸಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಹಲಸೂರು ಪೊಲೀಸರು ೫,೫೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಮೊಹಮ್ಮದ್ ಜಬಿ ಅಲಿಯಾಸ್ ಕಾಲು(೨೩)ಶೇಖ್ ಜುನೈದ್ ಅಲಿಯಾಸ್ (೨೦)ಬಂಧ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಬಂಧಿತರಿಂದ ೫,೫೦ ಲಕ್ಷ ಮೌಲ್ಯದ ೩ ದ್ವಿಚಕ್ರ ವಾಹನ, ಲೆನೋವಾ ಲ್ಯಾಪ್ ಟಾಪ್, ವಿವಿಧ ಕಂಪನಿಯ ೯ ಮೊಬೈಲ್ ಗಳು ಹಾಗೂ ಒಂದು ಸ್ಮಾರ್ಟ್ ವಾಚ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳೆದ ಅ.೧೭ ರಂದು ಹಲಸೂರಿನಲ್ಲಿ ನಡೆದಿದ್ದ ಮೊಬೈಲ್ ಸುಲಿಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಹಲಸೂರು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಸಂತೋಷ್ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
